ನರೇಗಲ್ಲ: ವೈದ್ಯರು ಆಧುನಿಕ ಕಾಲದ ಸಂಜೀವಿನಿಯಾಗಿದ್ದಾರೆ. ಅವರ ಬಳಿಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ವೈದ್ಯರ ಮೇಲೆ ವಿಶ್ವಾಸವನ್ನಿಟ್ಟರೆ ಖಂಡಿತ ಅವರು ಗುಣವಾಗಲು ಸಾಧ್ಯ. ಸುದೈವದಿಂದ ನರೇಗಲ್ಲ ಮತ್ತು ಸುತ್ತಲಿನ ಜನತೆ ಎಂದಿಗೂ ವೈದ್ಯರ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳದಿರುವುದಕ್ಕೆ ಹಿಂದಿನ ವೈದ್ಯರುಗಳು ಹಾಕಿಕೊಟ್ಟ ಪಾಠವೇ ಕಾರಣವಾಗಿದೆ ಎಂದು ಡಾ. ಕೆ. ಬಿ. ಧನ್ನೂರ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದ ಆಶ್ರಯದಲ್ಲಿ ಶನಿವಾರ ಜರುಗಿದ ವೈದ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ತಮ್ಮ ವೈಯಕ್ತಿಕ ಜೀವನವನ್ನೂ ಮರೆತು ವೈದ್ಯರು ರೋಗಿಗಳ ಸೇವೆಗೆ ಹಗಲಿರುಳು ಶ್ರಮಿಸುತ್ತಾರೆ. ಮೊದಲ ಹಂತದಲ್ಲಿಯೇ ರೋಗಿಯನ್ನು ಉಪಚಾರಕ್ಕೆಂದು ಕರೆದುಕೊಂಡು ಬಂದರೆ ಆ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಪಟ್ಟಣದ ಬೀಚಿ ಬಳಗದ ಸಾಹಿತ್ಯಿಕ ಮತ್ತು ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು.
ಡಾ. ಜಿ. ಕೆ. ಕಾಳೆ ಮಾತನಾಡಿ, ಪಟ್ಟಣದ ಎಲ್ಲ ವೈದ್ಯರುಗಳನ್ನು ಒಂದೇ ಸೂರಿನಡಿ ಸೇರಿಸಿ ಪರಸ್ಪರ ಭೇಟಿಯಾಗುವಂತೆ ಮಾಡಿದ ಬೀಚಿ ಬಳಗದ ಎಲ್ಲ ಸದಸ್ಯರ ಕಾರ್ಯ ಅನನ್ಯವಾದುದು ಎಂದರು.
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಾಮುದ್ರಿ ಮಾತನಾಡಿ, ಕಳೆದ ಹತ್ತು ವರ್ಷದ ನನ್ನ ಸೇವೆ ಗುರುತಿಸಿದ ಬೀಚಿ ಬಳಗವು ನನ್ನನ್ನೂ ಸನ್ಮಾನಿಸಿರುವುದು ನನ್ನ ಜೀವನದ ಅವಿಸ್ಮರಣೀಯ ಘಟನೆಗಳಲ್ಲಿ ಒಂದಾಗಿದೆ ಎಂದರು.
ಡಾ. ಕೃಷ್ಣಾ ಜಿ. ಕಾಳೆ, ಡಾ. ಆರ್.ಕೆ. ಗಚ್ಚಿನಮಠ, ಡಾ. ಎಲ್.ಎಸ್. ಗೌರಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಮಾತನಾಡಿದರು. ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ, ಡಾ. ಡೇನಿಯಲ್ ಫ್ರೆಡ್ರಿಕ್ಸ್, ಡಾ. ಸಪ್ನಾ ಕಾಳೆ, ಡಾ. ನಿರ್ಮಲಾ ನಾಶಿಪುಡಿ, ಡಾ. ಶಿವಯ್ಯ ರೋಣದ, ಡಾ. ನಾಗರಾಜ ಗ್ರಾಮಪುರೋಹಿತ, ಡಾ. ಎಲ್.ಆರ್. ರಡ್ಡೇರ, ಡಾ. ಜುಬೇದಾ ರೋಣದ, ವೈದ್ಯೆ ಕುರಿ, ಯೋಗಾ ಥೆರಪಿಸ್ಟ್ ಅಶ್ವಿನಿ ರಡ್ಡೇರ, ಡಾ. ಸುಷ್ಮಾ ಸಂಗನಾಳಮಠ ಹಾಗೂ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಮುತ್ತು ಹಡಪದ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮಾತನಾಡಿದರು. ಮುಖ್ಯ ಶಿಕ್ಷಕ ಬಿ.ಬಿ. ಕುರಿ, ಶಿಕ್ಷಕ ಬಿ.ಟಿ. ತಾಳಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ಶಿಕ್ಷಕ ಸಿ.ಕೆ. ಕೇಸರಿ, ಎಂ.ಎಚ್. ಸಿದ್ದಿ, ಮಾಜಿ ಯೋಧರಾದ ಶಿವಪುತ್ರಪ್ಪ ಸಂಗನಾಳ, ಪ್ರಭು ಮುಕ್ಕನಗೌಡ್ರ, ಶಿವಯೋಗಿ ಜಕ್ಕಲಿ, ವಿ.ಎ. ಕುಷ್ಟಗಿ, ಮುಖ್ಯೋಪಾಧ್ಯಾಯಿನಿ ಎನ್.ಎಸ್. ಹಿರೇಮಠ, ಕೆ.ಎಸ್. ಹಡಪದ, ರಾಜಶೇಖರಗೌಡ ಪಾಟೀಲ, ಜಿ.ಎ. ಬೆಲ್ಲದ, ಮುಖ್ಯೋಪಾಧ್ಯಾಯಿನಿ ಭಾರತಿ ಶಿರ್ಸಿ, ಎಸ್.ಕೆ. ಪಾಟೀಲ, ನಿವೃತ್ತ ಶಿಕ್ಷಕಿ ಎಚ್.ಎಂ. ರತ್ನಮ್ಮ, ಶಿಕ್ಷಕಿ ಟಿ.ಜಿ. ಕಂಬಾಳಿಮಠ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ, ಎ.ಎಸ್. ಅಣಗೌಡ್ರ, ದೈಹಿಕ ಶಿಕ್ಷಣ ಶಿಕ್ಷಕ ಆರ್.ಎಸ್. ನರೇಗಲ್ಲ, ಶಿಕ್ಷಕ ವಿ.ಎ. ಕುಂಬಾರ, ಬೀಚಿ ಬಳಗದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.