ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು ಹಾಗೂ ಸ್ತ್ರೀರೋಗ ತಜ್ಞರನ್ನು ನೇಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಟಿಎಚ್‌ಒ ಡಾ.ಬನದೇಶಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಎಂ ಗುರುನಾಥರೆಡ್ಡಿ, ಭೀಮಣ್ಣ ನಾಯಕ, ಪಿ.ನಂದಪ್ಪ ಮಡ್ಡಿ, ಸಾಬಣ್ಣ, ರಂಗಪ್ಪ ಗಾಲಿ, ಶಿವರಾಯ, ಮಲ್ಲಿಕಾರ್ಜುನ ಪಡಗಿನದೊಡ್ಡಿ, ಸಾಬಣ್ಣ ಮದರಕಲ್, ಕೆಂಚಪ್ಪ ಪ್ಯಾಟಿಗೌಡ, ಹನುಮಂತ್ರಾಯ ಇತರರಿದ್ದರು. 
ಜಿಲ್ಲೆ

ರೋಗಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿ

ಅರಕೇರಾ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರು ಹಾಗೂ ಸ್ತ್ರೀ ರೋಗ ತಜ್ಞರನ್ನು ನೇಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿ ದೇವದುರ್ಗದಲ್ಲಿ ಟಿಎಚ್‌ಒ ಡಾ.ಬನದೇಶಗೆ ಶನಿವಾರ ಮನವಿ ಸಲ್ಲಿಸಿದರು.

ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಎರವಲು ಸೇವೆಗೆ ಬಂದಿರುವ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆಸ್ಪತ್ರೆ ಒಳಗಿರುವ ಶೌಚಗೃಹ ವ್ಯವಸ್ಥೆ ಹದಗೆಟ್ಟಿದ್ದು,

ಕುಡಿಯುವ ನೀರಿಗೂ ತೊಂದರೆ ಇದೆ. ಸುಮಾರು 150 ಹಳ್ಳಿಗಳಿಂದ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಗರ್ಭಿಣಿಯರಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಕಾಯಂ ವೈದ್ಯರು ಹಾಗೂ ಸ್ತ್ರೀ ರೋಗ ತಜ್ಞರನ್ನು ನೇಮಕ ಮಾಡಬೇಕು.

ಆಸ್ಪತ್ರೆ ಸ್ವಚ್ಛತೆ ಕಾಪಾಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಎಂ.ಗುರುನಾಥರಡ್ಡಿ, ಭೀಮಣ್ಣ ನಾಯಕ, ಪಿ.ನಂದಪ್ಪ ಮಡ್ಡಿ, ಸಾಬಣ್ಣ, ರಂಗಪ್ಪ ಗಾಲಿ, ಶಿವರಾಯ, ಮಲ್ಲಿಕಾರ್ಜುನ ಪಡಗಿನದೊಡ್ಡಿ, ಸಾಬಣ್ಣ ಮದರಕಲ್, ಕೆಂಚಪ್ಪ ಪ್ಯಾಟಿಗೌಡ, ಹನುಮಂತ್ರಾಯ ಇತರರಿದ್ದರು.