ಕೂಡ್ಲಿಗಿ; ಇರುವ ಸಮಯದಲ್ಲಿಯೇ ಉತ್ತಮ ಸೇವೆ ನೀಡಿ, ಜನರ ಆರೋಗ್ಯ ಸುಧಾರಿಸಿ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಇದನ್ನೂ ಓದಿ: ಉತ್ತಮ ಸಂಸ್ಕಾರದಿಂದ ಉತ್ತಮ ಭವಿಷ್ಯ
ಪಟ್ಟಣದ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶುಕ್ರವಾರ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.b ರೋಗಿಗಳನ್ನು ತಾಳ್ಮೆಯಿಂದ ನೋಡಿಕೊಳ್ಳಬೇಕು. ಆಸ್ಪತ್ರೆ ಬಗ್ಗೆ ನಿತ್ಯ ದೂರು ಬರುತ್ತವೆ. ನೀವು ಸರಿಯಾಗಿ ತಿಳಿ ಹೇಳಿದರೆ ಸಮಸ್ಯೆ ಸರಿಪಡಿಸಬಹುದು.
ದೂರುಗಳು ಕಡಿಮೆಯಾದಷ್ಟು ಜನರ ಆರೋಗ್ಯ ಕಾಪಾಡುತ್ತೇವೆ ಎಂದು ಅರ್ಥ. ಜನರು ನಮ್ಮಿಂದ ಹೆಚ್ಚಿನ ಸೇವೆ ನಿರೀಕ್ಷೆ ಮಾಡುತ್ತಾರೆ. ಯಾವುದೇ ಸಂದರ್ಭದಲ್ಲಿ ರೋಗಿಗಳು ಆಸ್ಪತ್ರೆಗೆ ಬಂದರು ಮೊದಲು ಅವರಿಗೆ ಶುಶ್ರೂಷೆ ಮಾಡಿ ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಿ. ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ಕೂಡ್ಲಿಗಿ ಹಾಗೂ ಉಜ್ಜನಿ ಭಾಗದ ಆರೋಗ್ಯ ಸಿಬ್ಬಂದಿಗೆ ಈ ತಿಂಗಳಲ್ಲಿಯೇ ಸನ್ಮಾನ ಏರ್ಪಡಿಸಲಾಗುವುದು ಎಂದರು.
ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿದರು. ಜಿಲ್ಲಾ ಆರೋಗ್ಯಧಿಕಾರಿ ಡಾ.ಎಲ್.ಶಂಕರ್ ನಾಯ್ಕ, ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್, ಕಿರಿಯ ಆರೋಗ್ಯ ನಿರೀಕ್ಷಕಿಯರಾದ ಕೆ.ಸುನೀತಾ, ಪಿ.ಬಿ.ಗಿರಿಜಾ, ಭವ್ಯ, ನಮ್ಮ ಕ್ಲಿನಿಕ್ ವೈದ್ಯ ಡಾ.ಮಮತ, ಪಪಂ ಸದಸ್ಯರಾದ ಡಾಣಿ ಚೌಡಮ್ಮ, ಬಾಸೂ ನಾಯ್ಕ, ಸಚಿನ್ ಕುಮಾರ್, ಸಿರಿಬಿ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ ಇತರರಿದ್ದರು.