ಸಂಡೂರು: ಚದುರಂಗ ತಂತ್ರ-ಕೌಶಲವುಳ್ಳ ಆಟವಾಗಿದೆ ಎಂದು ಶಿವಪುರ ಶಿಕ್ಷಣ ಸಮಿತಿ ಅಧ್ಯಕ್ಷೆ ಯಶೋಧರ ದೇವಿ ಘೋರ್ಪಡೆ ಹೇಳಿದರು.
ಇದನ್ನೂ ಓದಿ: ಚದುರಂಗದಾಟದಲ್ಲಿ ಗೆದ್ದ ಡಾ.ಅಜಯಸಿಂಗ್
ಎಸ್‌ಆರ್‌ಎಸ್ ವಸತಿ ಶಾಲೆಯಲ್ಲಿ ಅಖಿಲ ಭಾರತ ಪಬ್ಲಿಕ್ ಶಾಲೆಗಳ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಚದುರಂಗ ಕ್ರಿ.ಶ.ಆರನೇ ಶತಮಾನದಲ್ಲಿ ಗುಪ್ತರ ಸಾಮ್ರಾಜ್ಯದ ಅವಧಿಯಲ್ಲಿ ಹುಟ್ಟಿಕೊಂಡಿತು. ಇದನ್ನು ಸಂಸ್ಕೃತದಲ್ಲಿ ಚತುರಂಗ ಎಂದು ಕರೆಯಲಾಗುತ್ತಿತ್ತು. ಏಕಾಗ್ರತೆ ಮತ್ತು ತಾಳ್ಮೆ ಕಲಿಯಲು ಸಹಾಯ ಮಾಡುತ್ತದೆ ಎಂದರು.
ದೆಹಲಿಯ ಆರ್.ಕೆ.ಪುರಮ್ ಪಬ್ಲಿಕ್ ಶಾಲೆ ಸಮಗ್ರ ಚಾಂಪಿಯನ್‌ಷಿಪ್ ಆಯಿತು. 14ರ ವಯೋಮಾನದ ವಿಭಾಗದಲ್ಲಿ ನವದೆಹಲಿ ಮಥುರಾ ರೋಡ್‌ನ ಪಬ್ಲಿಕ್ ಶಾಲೆ ಪ್ರಥಮ, ಛತ್ತೀಸ್‌ಗಡದ ರಾಜ್‌ಕುಮಾರ್ ಕಾಲೇಜ್ ದ್ವಿತೀಯ ಹಾಗೂ ಮಧ್ಯಪ್ರದೇಶದ ಇಂದೋರ್‌ನ ದಿ ಎಮೆರಾಲ್ಡ್ ಹೈಟ್ಸ್ ಇಂಟರ್ ನ್ಯಾಷನಲ್ ಶಾಲೆ ಮೂರನೇ ಸ್ಥಾನ ಪಡೆದಕೊಂಡಿತು.
ಸ್ಮಯೋರ್‌ನ ಸ್ವತಂತ್ರ ನಿರ್ದೇಶಕ ಆನಂದ್‌ಸೇನ್, ಎಂಡಿ ಬಹಿರ್ಜಿ ಅಜಯ್ ಘೋರ್ಪಡೆ, ವೈಷ್ಣವಿ ಬಹಿರ್ಜಿ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ, ಶಿವಪುರ ಶಿಕ್ಷಣ ಸಮಿತಿ ಕಾರ್ಯದರ್ಶಿ ಆಶಿಯಾ ಬಾನು, ಎಸ್‌ಆರ್‌ಎಸ್ ಶಾಲೆ ಪ್ರಾಚಾರ್ಯ ವಿನಾಶ್ ತ್ಯಾಗಿ, ಸ್ಮಯೋರ್ ಸಂಸ್ಥೆ ಸಿಇಒ ಮಂಜುನಾಥ್ ಪ್ರಭು, ಪ್ರಮುಖರಾದ ಕೃಷ್ಣೇಂದು ಸನ್ಯಾಲ್, ಪ್ರತಿಭಾ ಜೀರಗಿ, ಟಿ.ಜಿಯಾ ಇದ್ದರು.