ಜಿಲ್ಲೆ

ಸ್ವಸ್ಥ ಆರೋಗ್ಯ ಸಾಧನೆಗೆ ದಾರಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಕ್ರಿಕೆಟ್​ ಅಕಾಡೆಮಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭವು ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದ ಮೈದಾನದಲ್ಲಿ ಬುಧವಾರ ಜರುಗಿತು.
ಅಕಾಡೆಮಿ ಅಧ್ಯ ಶಿವಲಿಂಗ ನೀಲಗುಂದ ಮಾತನಾಡಿ, ಇಂದಿನ ದುಬಾರಿ ವೈದ್ಯಕಿಯ ಚಿಕಿತ್ಸಾ ಪದ್ಧತಿಯಿಂದ ಸಾಮಾನ್ಯ ಜನರು ಆಥಿರ್ಕ ಸಂಸಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಆರೋಗ್ಯವನ್ನು ಸ್ವಸ್ಥವಾಗಿ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ, ದೈಹಿಕ ವ್ಯಾಯಾಮ ಮುಖ್ಯವಾಗಿದೆ ಎಂದ ಅವರು, ಅಕಾಡೆಮಿ ಮಕ್ಕಳಿಗಾಗಿ ಕೈಗೊಂಡ ಹೊಸ ಹೊಸ ತರಬೇತಿ ವಿಧಾನಗಳ ಬಗ್ಗೆ ಪಾಲಕರಿಗೆ ಮಾಹಿತಿ ನೀಡಿದರು.
ಅಕಾಡೆಮಿ ಗೌರವಾಧ್ಯ ಎಸ್​.ಎಂ.ಅಗಡಿ ಮಾತನಾಡಿ ಶಿಬಿರಾಥಿರ್ಗಳಿಗೆ ಶುಭ ಹಾರೈಸಿದರು. ಗುರುರಾಜ ತುರಮುರಿ, ಶಿಬಿರಾಥಿರ್ಗಳ ಪಾಲಕರಾದ ರೇವಯ್ಯ ಹಿರೇಮಠ, ನೀಲಮ್ಮ .ಎಚ್​. ಮಾತನಾಡಿದರು. ಅಕಾಡೆಮಿ ತರಬೇತುದಾರ ಜಗದೀಶ ಸಸಾಲಟ್ಟಿ ಮಾತನಾಡಿ ತರಬೇತಿಯ ಮಾಹಿತಿ ನೀಡಿದರು.