ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆಕಟ್ಟೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಪೂಜಾರಿ ಧ್ವಜಾರೋಹಣಗೈದರು 
ಜಿಲ್ಲೆ

ಸಂತೆಕಟ್ಟೆಯಲ್ಲಿ ಮಕ್ಕಳಿಂದ ಪಥ ಸಂಚಲನ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆಕಟ್ಟೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ನರಸಿಂಹ ನಾಯಕ್, 38ನೇ ಕಳ್ತೂರು ಗ್ರಾಪಂ ಅಧ್ಯಕ್ಷ ನವೀನ್ ಕುಮಾರ್, ಪಿಡಿಒ ಸವಿತಾ, ಮುಖ್ಯ ಶಿಕ್ಷಕ ಮಾಧವ, ಗ್ರಾಪಂ ಸದಸ್ಯ ಚಂದ್ರಶೇಖರ್ ಶೆಟ್ಟಿ, ಉದ್ಯಮಿ ಉದಯ್ ನಾಯಕ್, ವಿವಿಧ ಸಂಘ ಸಂಸ್ಥೆಯವರು, ಎಸ್‌ಕೆಡಿಆರ್‌ಡಿಪಿ ಸಂತೆಕಟ್ಟೆ ವಲಯದ ಸೇವಾಪ್ರತಿನಿಧಿ ಕಸ್ತೂರಿ, ಚೇರ್ಕಾಡಿ ಶೌರ್ಯ ಘಟಕ ಸದಸ್ಯರು, ಹೊಯ್ಸಳ ಫ್ರೆಂಡ್ಸ್ ಸದಸ್ಯರು, ಗ್ರಾಪಂ ಸದಸ್ಯರು, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಪಾಲಕರು, ವಿದ್ಯಾಭಿಮಾನಿಗಳು ಶಿಕ್ಷಕವೃಂದ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಿಕ್ಷಕಿ ಹೇಮಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ಚಂದ್ರ ಬಾಬು ವಂದಿಸಿದರು.