ಜಿಲ್ಲೆ

ಖೀವಸರ್​ಗೆ ಪತಂಜಲಿಯಿಂದ ಸ್ವಾಗತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ರಾಜಸ್ಥಾನದ ನಾಗೌರ್​ನಿಂದ ಹಿಮಾಲಯದ ಮೌಂಟ್ ಎವರೆಸ್ಟ್​ವರೆಗೆ ಪರಿಸರ ಸಂರಕ್ಷಣೆಯ ಜನ ಜಾಗೃತಿ ಸೈಕಲ್ ಯಾತ್ರೆ ಕೈಗೊಂಡಿರುವ ಪಪ್ಪುರಾಮ ಚೌಧರಿ ಖೀವಸರ್ ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಕೇಶ್ವಾಪುರ ಆಜಾದ ಕಾಲನಿಯ ಬಾಫಣಾ ಭವನದಲ್ಲಿ ಪತಂಜಲಿ ಯೋಗಪೀಠ ಪರಿವಾರದಿಂದ ಸ್ವಾಗತಿಸಲಾಯಿತು.

ಅವರು ಪರಿಸರ ಸಂರಕ್ಷಣಾ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿ ಎಂಬ ಅಗ್ನಿಹೋತ್ರ ಹೋಮ ಹವನ ನಡೆಸಲಾಯಿತು. ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮಾವು, ಸೀತಾಫಲ, ದಾಳಿಂಬೆ, ಬಾಳೆ ಸಸಿಗಳನ್ನು ನೆಟ್ಟು ಅವುಗಳಿಗೆ ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಎಂದು ಹೆಸರಿಸಲಾಯಿತು.

ಈ ವೇಳೆ ಯೋಗ ಗುರು ಭವರಲಾಲ ಆರ್ಯ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಂವರ್ಧನೆ ಸಂದೇಶ ನೀಡಲು ಪಪ್ಪುರಾಮ ಅವರು 60 ಸಾವಿರ ಕಿಲೋಮೀಟರ್ ಜನ ಜಾಗೃತಿ ಸೈಕಲ್ ಯಾತ್ರೆಯಂಥ ಸಾಹಸಿ ಕಾರ್ಯ ನಡೆಸಿದ್ದಾರೆ. ಅವರಿಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು. ಪರಿಸರ ಸಂರಕ್ಷಣೆ ಮಾಡಲು ನಿರಂತರವಾಗಿ ಗಿಡಗಳನ್ನು ನೆಡುವ ಕೆಲಸ ಮಾಡಬೇಕು ಎಂದರು.

ಸುನೀಲ ಚೌಧರಿ, ಜಿಗ್ನೇಶ ಪಟೇಲ, ಚನ್ನವೀರ ಸ್ವಾಮಿ, ಕೃಷ್ಣ ಸೂರ್ಯವಂಶಿ, ವೀರೇಶ ನಾಯಕ, ಅಕ್ಷಯ ಘೊರ್ಪಡೆ, ಪಪ್ಪುಲಾಲ ಜಾಟ್, ಜೈರೂಪ ದೌಕಿಯಾ, ಇತರರಿದ್ದರು.