ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಗಜೇಂದ್ರಗಡದ ಹಜರತ್ ಸೈಯದ್ ನಿಜಾಮುದ್ದೀನ್ ಷಾ ಮಾತನಾಡಿದರು. ವೀರಶೈವ ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ತಾಲೂಕು ಅಧ್ಯಕ್ಷ ಅಕ್ಕಿ ಶಿವಣ್ಣ, ಶಿವಶಂಕರಗೌಡ, ಪುರಾಣ ಪ್ರವಚನಕಾರ ಓಂ.ಸುಕುಮಾರ ಸ್ವಾಮಿ ಇನ್ನಿತರರಿದ್ದರು. 
ಜಿಲ್ಲೆ

ಭಗವಂತನಿಗೆ ಭಾವೈಕ್ಯದ ಭಕ್ತಿ ಪ್ರಿಯ - ಹಜರತ್ ಸೈಯದ್ ನಿಜಾಮುದ್ದೀನ್ ಷಾ ಅಭಿಮತ

ಹಗರಿಬೊಮ್ಮನಹಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜಾತಿ, ತಾರತಮ್ಯವಿಲ್ಲದೆ, ಎಲ್ಲರೂ ಸೌಹಾರ್ದದಿಂದ ಬಾಳುತ್ತಿರುವುದರಿಂದ ಪುರಾಣ, ಪುಣ್ಯ ಕತೆಗಳು ನಡೆಯುತ್ತಿವೆ ಎಂದು ಗಜೇಂದ್ರಗಡದ ಹಜರತ್ ಸೈಯದ್ ನಿಜಾಮುದ್ದೀನ್ ಷಾ ಹೇಳಿದರು.

ಹಂಪಾಪಟ್ಟಣದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮಂಗಳವಾರ ಉಪನ್ಯಾಸ ನೀಡಿದರು. ಭಾವೈಕ್ಯದ ಭಕ್ತಿ ಭಗವಂತನಿಗೆ ಅತ್ಯಂತ ಪ್ರಿಯವಾದದ್ದು. ವೇದ, ಉಪನಿಷತ್‌ಗಳಲ್ಲಿರುವ ಸಾರ ಕುರಾನ್‌ನಲ್ಲಿರುವುದು, ಬೈಬಲ್‌ನಲ್ಲಿರುವುದು ಎಲ್ಲ ಒಂದೇ. ಆದರೆ, ಅವುಗಳ ಮಹತ್ವ ಅರಿಯುವಲ್ಲಿ ನಾವು ಸೋತಿದ್ದೇವೆ. ಆದ್ದರಿಂದ ಸರ್ವರೂ ಎಲ್ಲ ಧರ್ಮಗಳಲ್ಲಿರುವ ಪ್ರೀತಿ, ಸೌಹಾರ್ದ ಅರಿತುಕೊಂಡು ಭಾವೈಕ್ಯದಿಂದ ಬಾಳೋಣ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ತಾಲೂಕು ಅಧ್ಯಕ್ಷ ಅಕ್ಕಿ ಶಿವಣ್ಣ, ಪ್ರಮುಖರಾದ ಶಿವಶಂಕರಗೌಡ, ಎನ್.ಮಂಗಳ ಬಸವರಾಜ, ಸೌಮ್ಯ ಬಸವರಾಜ, ಅಯ್ಯನಗೌಡ, ಶರಣಬಸವೇಶ್ವರ ಟ್ರಸ್ಟ್‌ನ ಬುಳ್ಳನಗೌಡ್ರು, ಎಚ್.ಶಿವಾನಂದ, ಈಶ್ವರ ಗೌಡ್ರು, ಉಪ್ಪಾರ್ ನಾಗಪ್ಪ, ತಳವಾರ್ ಬಿದ್ದಪ್ಪ, ಕಂಬಾರ್ ಹನುಮಂತಪ್ಪ, ಶರಣಪ್ಪ, ತಳವಾರ್ ಕೊಟ್ರೇಶ, ಕೇಶವಮೂರ್ತಿ, ಗ್ರಾಮಸ್ಥರು, ಕೇಶವರಾಯನ ಬಂಡಿಯ ಮುಸ್ಲಿಂ ಸಮುದಾಯ್ದವರು ಇದ್ದರು.