raichur 
ಜಿಲ್ಲೆ

ಬಸ್‌ಗಳಿಲ್ಲದೆ ಪರದಾಡಿದ ಪ್ರಯಾಣಿಕರು

Raichur - Reporter - Rachhai Swamy

ರಾಯಚೂರು ಹೊಸಪೇಟೆಯಲ್ಲಿ ಮೇ 20 ರಂದು ರಾಜ್ಯ ಸರ್ಕಾರದ ಸಾಧನೆ ಸಮಾವೇಶ ಹಾಗೂ ವಿವಿಧ ಸವಲತ್ತುಗಳ ವಿತರಣಾ ಸಮಾವೇಶ ನಿಮಿತ್ತ ಜಿಲ್ಲೆಯಾದ್ಯಂತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ವ್ಯತ್ಯಯದಿಂದ ಸೋಮವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಜನರು ಪರದಾಡುವಂತಾಯಿತು.

ನಿತ್ಯ ರಾಯಚೂರು ನಗರದಿಂದ ಸಿಂಧನೂರು,ಮಾನ್ವಿ, ಲಿಂಗಸೂಗೂರು ,ದೇವದುರ್ಗ, ಮಂತ್ರಾಲಯ ನಿತ್ಯ ನೂರಾರು ಜನರು ಓಡಾಡುತ್ತಾರೆ. ಆದರೆ, ಬಸ್ ಸಂಖ್ಯೆ ಕಡಿಮೆಯಾಗಿದ್ದರಿಂದ ಇತರೆಡೆಗೆ ತೆರಳಲು ಹೆಚ್ಚು ಪ್ರಯಾಣಿಕರಿದ್ದರೂ ಸಮರ್ಪಕ ಬಸ್‌ಗಳು ಇಲ್ಲದ ಕಾರಣ ಹಲವರು ಕೆಕೆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲ್ಲೇ ವಾಪಸ್ ತೆರಳಿದರು.

ಬೆರಳೆಣಿಕೆಯಷ್ಟು ಬಸ್‌ಗಳೂ ಬಂದರೂ ನುಕ್ಕುನುಗ್ಗಲು ಉಂಟಾಗಿತ್ತು. ಖಾಸಗಿ ವಾಹನ ಟಾಪ್ ಮೇಲೆ ಕುಳಿತುಕೊಂಡು ಹೋಗುವ ದೃಶ್ಯವೂ ಕಂಡುಬಂದವು. ಜತೆಗೆ, ಯಾವ, ಯಾವ ಮಾರ್ಗಗಳಿಗೆ ಬಸ್‌ಗಳು ಎಷ್ಟು ಗಂಟೆಗೆ ಬರುತ್ತವೆ ಎಂಬುದರ ಬಗ್ಗೆ ನಿಲ್ದಾಣದ ಬಳಿ ಫಲಕ ಅಳವಡಿಸಿದ ಕಾರಣ ಪ್ರಯಾಣಿಕರು ಬಂದ ಬಸ್‌ಗಳತ್ತ ದೌಡಾಯಿಸಿ ವಿಚಾರಿಸುತ್ತಿದ್ದರು. ಜತೆಗೆ ಬಸ್ ಮಾಹಿತಿ ಕೇಳಲು ನಿಲ್ದಾಣದಲ್ಲಿರುವ ಸಿಬ್ಬಂದಿಯನ್ನು ವಿಚಾರಿಸಿದರೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ ಎಂದು ಕೆಲ ಪ್ರಯಾಣಿಕರು ಅಲವತ್ತುಕೊಂಡರು.