ಜಿಲ್ಲೆ

ಪರ್ಯಾಯ ಮಹೋತ್ಸವ ಪ್ರವಚನ

ಹುಬ್ಬಳ್ಳಿ: ಇಲ್ಲಿಯ ದುರ್ಗದಬೈಲ್ ಗವಳಿ ಗಲ್ಲಿಯ ಶ್ರೀ ವೆಂಕಟೇಶ ದೇವರ ದೇವಸ್ಥಾನದಲ್ಲಿ 2025-26ರ ಪರ್ಯಾಯ ಮಹೋತ್ಸವ ನಿಮಿತ್ತ ವಿವಿಧ ಪಂಡಿತರಿಂದ ಸಮಗ್ರ ಭಾಗವತ ಜ್ಞಾನಸತ್ರ ಹಮ್ಮಿಕೊಳ್ಳಲಾಗಿದೆ.

ಅ. 8ರಿಂದ 12ರ ವರೆಗೆ ನಿತ್ಯ ಸಂಜೆ 6.30ಕ್ಕೆ ಭಾಗವತ ಸಪ್ತಮ ಸ್ಕಂಧ ಕುರಿತು ಪಂ. ಶ್ರೀಕಾಂತಾಚಾರ್ಯ ಮುಕ್ಕುಂದಿ ಅವರು ಪ್ರವಚನ ನೀಡುವರು.
ಅ. 12ರಂದು ಬೆಳಗ್ಗೆ 10ಕ್ಕೆ ನಮ್ಮ ನಿಜವಾದ ಗುರಿ ಯಾವುದು? ಕುರಿತು ಪಂಡಿತರು ಯುವಕರಿಗಾಗಿ ಧಾರ್ಮಿಕ ಪ್ರಶ್ನೋತ್ತರ, ಜಿಜ್ಞಾಸೆ ಕಾರ್ಯಕ್ರಮ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.