ರಾಯಚೂರು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿ ಸಾವಿರಾರು ಕೋಟಿ ರೂ ಅನುದಾನ ಬಿಡುಗಡೆಯಾಗುತ್ತಿದ್ದರೂ ಈ ಭಾಗದ ಅಭಿವೃದ್ಧಿ ಬದಲಾವಣೆಯಾಗದೇ ಇರುವದರಿಂದ ನ್ಯಾಯಬದ್ದ ಅಭಿವೃದ್ಧಿಗೆ ಒತ್ತಾಯಿಸಿ ವೇಲ್ಪೆರ್ ಪಾರ್ಟಿ ಆಫ್ ಇಂಡಿಯಾ ಅ.6ರಿಂದ 13ವರೆಗೆ ನಿಷ್ಟೆಯ ನಡಿಗೆ ಜಾಥಾ ಪ್ರಾರಂಭಿಸಿದೆಂದು ಪಕ್ಷದ ರಾಜ್ಯಾಧ್ಯಕ್ಷ ತಾಹೀರ ಹುಸೇನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ರೂ ಅನುದಾನ ನೀಡುವದಾಗಿ ಘೋಷಿಸುತ್ತಿವೆ. ಆದರೆ ಪರಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಬಾಣಂತಿಯರ ಸಾವು, ಅಪೌಷ್ಠಿಕತೆ, ಮಕ್ಕಳ ಮಾರಾಟ, ಬಾಲ್ಯ ವಿವಾಹ, ನಿರುದ್ಯೋಗದಂತಹ ಸಮಸ್ಯೆಗಳು ಪರಿಹಾರ ಕಂಡಿಲ್ಲ. 371 (ಜೆ) ಕಾಯ್ದೆ ಅನುಷ್ಠಾನಗೊಳಿಸಿ ಶಿಕ್ಷಣಮತ್ತು ಉದ್ಯೋಗದಲ್ಲಿ ಮೀಸಲು ನಿಗಧಿಗೊಳಿಸಲಾಗಿದೆ. ಆದರೆ ನೇಮಕಾತಿಗಳೇ ನಡೆಯುತ್ತಿಲ್ಲ.
ಪ್ರತಿ ವರ್ಷ 10 ಸಾವಿರ ಇಂಜಿನಿಯರ್ ವಿದ್ಯಾರ್ಥಿಗಳು ಶಿಕ್ಷಣ ಮುಗಿಸುತ್ತಿದ್ದಾರೆ. ಆದರೆ ಉದ್ಯೋಗಕ್ಕಾಗಿಬೇರೆಡೆ ವಲಸೆ ಹೋಗುವಸ್ಥಿತಿಯಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪಡೆದು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯದೇ ವೈದ್ಯರು, ಇಂಜಿನಿಯರ್‌ಗಳ ಕೊರತೆ ಎದುರಿಸುವಂತಾಗಿದೆ. 22 ಸಾವಿರ ಶಿಕ್ಷಕ ಹುದ್ದೆಗಳು ಖಾಲಿಯಿದ್ದರೂ ಭರ್ತಿಯಾಗಿಲ್ಲ. 80 ಸಾವಿರ ಸರ್ಕಾರಿ
ಹುದ್ದೆಗಳು ಖಾಲಿಯಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮೂದಾಯ ಆರೋಗ್ಯ ಕೇಂದ್ರಗಳು ಜನಸಂಖ್ಯೆಗೆ ಅನುಗುಣವಾಗಿ ಸ್ಥಾಪನೆಯಾಗಿಲ್ಲ. 11 ಪ್ರಮಖ ಬೇಡಿಕೆಗಳಿನ್ನಿಟ್ಟು ಎಸ್‌ಡಿಪಿಐ ಜಾಥಾ ಬೀದರ್‌ನಿಂದ ಪ್ರಾರಂಭಿಸಲಾಗಿ ದೆ. ಬೇಡಿಕೆಗಳ ಪಟ್ಟಿಯನ್ನು ಜಾಥಾ ಸಮಾರೋಪದ ನಂತರ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಸಾಲಿಯಾನ್, ಜಿಲ್ಲಾಧ್ಯಕ್ಷ ಶೇಖ್ ಫರೀದ್ ಉಮರಿ, ಅಬ್ದುಲ್ ಸಲಾಂ, ಇರ್ಫಾನ್, ಅಬ್ದುಲ್ ಗನಿ ಇದ್ದರು.