ಚಿಕ್ಕೋಡಿ: ಪಕ್ಷದಲ್ಲಿ ಅಧಿಕಾರ ಹಾಗೂ ಹುದ್ದೆ ಮುಖ್ಯವಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡುವುದು ಅತೀ ಮುಖ್ಯ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.
ಬುಧವಾರ ಪಟ್ಟಣದ ಕೇಶವ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ ಮಾತನಾಡಿ, ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಲಿದೆ ಎನ್ನುವುದಕ್ಕೆ ಚಿಕ್ಕೋಡಿ ಜಿಲ್ಲೆ ಸಾಕ್ಷಿಯಾಗಿದೆ. ಇಲ್ಲಿನ 8 ವಿಧಾನಸಭೆ ಕ್ಷೇತ್ರದಲ್ಲಿ ನಾವು 6 ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ವಿಭಾಗ ಪ್ರಭಾರಿ ಚಂದ್ರಶೇಖರ ಕೆ., ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಜಿಲ್ಲಾ ಪ್ರಭಾರಿ ಲಿಂಗರಾಜ ಪಾಟೀಲ, ಸಹ ಪ್ರಭಾರಿ ಉಜ್ವಲಾ ಬಡವನಾಚೆ, ಮಾಜಿ ಶಾಸಕ ಮನೋಹರ ಕಟ್ಟೀಮನಿ, ನಾಗೇಶ ಕಿವಡ ಇತರರು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ ಸ್ವಾಗತಿಸಿದರು. ಸತೀಶ ಅಪ್ಪಾಜಿಗೋಳ ನಿರೂಪಿಸಿದರು. ರಮೇಶ ಖೇತಗೌಡರ ವಂದಿಸಿದರು.