ಲಿಂಗಸುಗೂರಿನಲ್ಲಿ ನಮ್ಮ ಕರ್ನಾಟಕ ಸೇನೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಮುರುಘೇಂದ್ರ ಶ್ರೀ, ಹಾಗೂ ಶಾಸಕ ಮಾನಪ್ಪ ವಜ್ಜಲ್ ಪುಷ್ಪನಮನ ಸಲ್ಲಿಸಿದರು. ಸೇನೆಯ ಜಿಲ್ಲಾಧ್ಯಕ್ಷ ಕೆ.ಕೊಂಡಪ್ಪ, ತಾಲೂಕು ಅಧ್ಯಕ್ಷ ಶಿವರಾಜ ನಾಯಕ, ಕಾರ್ಯದರ್ಶಿ ನಿರುಪಾದಿ ಹಿರೇಮಠ, ಪ್ರಮುಖರಾದ ಶ್ರೀನಿವಾಸ ಅಮ್ಮಾಪುರ, ವೀರನಗೌಡ ಲೆಕ್ಕಿಹಾಳ, ಅಯ್ಯಪ್ಪ ವಕೀಲ ಇದ್ದರು. 
ಜಿಲ್ಲೆ

ಪಕ್ಷ-ಭೇದ ಮರೆತು ತಾಯ್ನಡಿನ ರಕ್ಷಣೆಗೆ ನಿಲ್ಲಲಿ

ರುದ್ರಪ್ಪ ವಾಲಿ

ಲಿಂಗಸುಗೂರು: ರ್ನಾಟಕ ಏಕೀಕರಣದ ಬಳಿಕ ಕನ್ನಡ ನಾಡು-ನುಡಿ, ನೆಲ-ಜಲ ರಕ್ಷಣೆ ವಿಚಾರ ಬಂದಾಗ ಕನ್ನಡಪರ ಸಂಘಟನೆಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಮ್ಮ ಕರ್ನಾಟಕ ಸೇನೆ ಸಂಘಟನೆಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾರಾಷ್ಟ್ರ, ಗೋವಾ ರಾಜ್ಯಗಳು ಕನ್ನಡ ನಾಡಿನ ಗಡಿ ವಿಚಾರದಲ್ಲಿ ತಗಾದೆ ತೆಗೆದಾಗಲೆಲ್ಲ ಕನ್ನಡ ಪರ ಸಂಘಟನೆಗಳ ದಿಟ್ಟ ಹೋರಾಟದಿಂದ ಮಾತೃ ಭೂಮಿ, ಭಾಷೆ ಉಳಿಯಲು ಸಾಧ್ಯವಾಗಿದೆ. ನಾವೆಲ್ಲರೂ ಜಾತಿ, ಮತ, ಪಂಥ, ಪಕ್ಷ-ಭೇದ ಮರೆತು ತಾಯ್ನಡಿನ ರಕ್ಷಣೆಗೆ ಕಟಿಬದ್ಧವಾಗಿ ನಿಲ್ಲಬೇಕಿದೆ.

ಬಾಂಗ್ಲಾದೇಶ, ಅಫಘಾನಿಸ್ತಾನ, ಶ್ರೀಲಂಕಾ ಸೇರಿ ಇತರೆ ರಾಷ್ಟ್ರಗಳಲ್ಲಿ ಆಡಳಿತ ವೈಫಲ್ಯದಿಂದ ಜನತೆ ಬೀದಿಗೆ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಾ ಬರುತ್ತಿರುವ ರೈತರ ಹೆಸರಿನ ಪಹಣಿ ಪ್ರತಿಯಲ್ಲಿ ಇತ್ತೀಚೆಗೆ ವಕ್ಫ್ ಬೋರ್ಡ್ ನಮೂದಾಗಿರುವುದು ಆತಂಕ ತಂದಿದೆ. ಯಾವ ಉದ್ದೇಶಕ್ಕಾಗಿ ಈ ರೀತಿ ಸೇರಿಸಲಾಗಿದೆ ಎಂದು ಸರ್ಕಾರದ ಮಟ್ಟದಲ್ಲಿ ಉನ್ನತ ತನಿಖೆ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು.

ಕ್ಷೇತ್ರದಲ್ಲಿ ನೀರಾವರಿ, ಕುಡಿಯುವ ನೀರು, ರಸ್ತೆ, ಆರೋಗ್ಯ ಸೇರಿ ಸಮಗ್ರ ಅಭಿವೃದ್ಧಿಗೆ ಪಕ್ಷ-ಭೇದ ಮರೆತು ಸಹಕಾರ ನೀಡಬೇಕು ಎಂದು ಹೇಳಿದರು.

ಪ್ರಮುಖರಾದ ನಿಂಗಣ್ಣ ದೇವಿಕೇರಿ, ವೆಂಕಟೇಶ ಕೊಂಪಲ್, ವೀರಭದ್ರಯ್ಯ ಯಲಗಲದಿನ್ನಿ, ವೀರೇಶ ಜಗವತಿಮಠ, ಶೇಖರಪ್ಪ ಸುರಪುರ, ಎನ್.ಸ್ವಾಮಿ ಹಟ್ಟಿ, ಬಸವರಾಜ ನಾಯಕ, ಚಂದ್ರು ನಾಯಕ, ಮಹಾಂತಯ್ಯ, ರಾಜೇಶ, ವೆಂಕಟೇಶ ಇತರರಿದ್ದರು.