ಉಡುಪಿ: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಯುವತಿಯೊಬ್ಬಳಿಂದ 1.13 ಲಕ್ಷ ರೂ. ಅನ್ ಲೈನ್ ಮೂಲಕ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.
ರೀಚಾ ಸಚಾನ (27) ಎಂಬುವವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಗಳು ವಾಟ್ಸಪ್ ಮೂಲಕ ಲಿಂಕ್ನ್ನು ಕಳುಹಿಸಿ ಆ.20 ರಿಂದ 21ರ ಮಧ್ಯಾವದಿಯಲ್ಲಿ ಒಟ್ಟು 1,13,300 ರೂ. ಹಣವನ್ನು ಆನ್ ಲೈನ್ ಮುಖೇನ ಹಂತ ಹಂತವಾಗಿ ಪಡೆದು, ಉದ್ಯೋಗ ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.