ಜಿಲ್ಲೆ

ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಆತ್ಮವಿಶ್ವಾಸ ವೃದ್ಧಿ

ಬಸವರಾಜ ವೀರಪ್ಪ ಗರಗ

ಅಂಕೋಲಾ: ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಅವರ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಅತಿಮುಖ್ಯ. ಬಹುಮಾನ ನಂತರದ್ದು, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಸಿಗುವ ಖುಷಿ ಬದುಕಿನ ಕೊನೆಯವರೆಗೂ ಜೀವಂತವಾಗಿರುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

ಇಲ್ಲಿನ ಪಿ.ಎಂ. ಸಂಯುಕ್ತ ಪಪೂ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಕೋಲಾ ತಾಲೂಕು ಮಟ್ಟದ ಪಪೂ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆನರಾ ವೆಲ್​ಫೆರ್ ಟ್ರಸ್ಟಿನ್ ಸದಸ್ಯ ಡಾ.ವಿ.ಎನ್. ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗುವುದರ ಬದಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ನಿಮ್ಮ ಸಂತೋಷ ಇಮ್ಮಡಿಯಾಗುತ್ತದೆ ಎಂದರು.

ಉಪನ್ಯಾಸಕರಾದ ಉಲ್ಲಾಸ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಮೇಶ ಗೌಡ ಎಂ., ಸಿಬ್ಬಂದಿಗಳಾದ ವಿನಾಯಕ ನಾಯ್ಕ, ಗಣಪತಿ ಗೌಡ, ಜಿ.ಸಿ. ಕಾಲೇಜ್ ಉಪನ್ಯಾಸಕಿ ಸೌಮ್ಯಾ ಕಾಮತ, ಅನುಷಾ ಪಡ್ನೆಕರ್, ರೇಷ್ಮಾ ನಾಯ್ಕ, ಶಿಲ್ಪಾ ಹೊನ್ನಕೋಟೆ, ಶೃತಿ ನಾಯ್ಕ ಸಹಕರಿಸಿದರು.

ಸಾಹಿತಿ ನಾಗೇಂದ್ರ ನಾಯಕ ತೊರ್ಕೆ, ಜೆ. ಪ್ರೇಮಾನಂದ, ಮಹಾಂತೇಶ ರೇವಡಿ, ಎಸ್.ಆರ್. ಉಡುಪ, ಉಪನ್ಯಾಸಕರಾದ ಎಸ್.ಆರ್. ನಾಯಕ, ಅಶೋಕ ಆಗೇರ, ಶಿಕ್ಷಕ ಬಾಲಚಂದ್ರ ನಾಯಕ, ಮಹಾಬಲೇಶ್ವರ ಗೌಡ, ಪ್ರಶಾಂತ ನಾಯ್ಕ, ಮಧುರಾ ಭಟ್ಟ, ಶಶಿಧರ ಭಟ್ಟ ನಿರ್ಣಾಯಕರಾಗಿ ನಿರ್ವಹಿಸಿದರು.

ವಿದ್ಯಾರ್ಥಿನಿ ಯಶೋಧ ಗೌಡ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜ್ ಪ್ರಾಚಾರ್ಯ ಫಾಲ್ಗುಣ ಗೌಡ, ಉಮೇಶ ಎಲ್. ಗೌಡ, ಹಾಗೂ ಶ್ರೀನಿವಾಸ ಯು.ಕೆ. ಕಾರ್ಯಕ್ರಮ ನಿರ್ವಹಿಸಿದರು.