ಶರಣಪ್ಪ ಸುಣಗಾರ, ಮಾಜಿ ಶಾಸಕ  
ಜಿಲ್ಲೆ

ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಿ, ಜಾತಿ ಕಾಲಂನಲ್ಲಿ ತಳವಾರ ಎಂದೇ ಬರೆಯಿಸಿ; ಮಾಜಿ ಶಾಸಕ ಶರಣಪ್ಪ ಸುಣಗಾರ

ವಿಜಯಪುರ: ರಾಜ್ಯಾದ್ಯಂತ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ತಳವಾರ ಸಮುದಾಯದವರು ತಪ್ಪದೇ ಪಾಲ್ಗೊಳ್ಳಬೇಕಲ್ಲದೇ ಜಾತಿ ಕಾಲಂನಲ್ಲಿ ತಳವಾರ ಎಂದೇ ನಮೂಸುವಂತೆ ತಿಳಿಸಿದ್ದಾರೆ.

ಈಗಾಗಲೇ ಸಮುದಾಯದ ಹಲವು ಗಣ್ಯರು, ಪ್ರಜ್ಞಾವಂತ ಯುವಕರು ಮತ್ತು ತಜ್ಞರೊಂದಿಗೆ ಚರ್ಚಿಸಿ ಒಮ್ಮತದ ತೀಮಾರ್ನ ಕೈಗೊಳ್ಳಲಾಗಿದ್ದು, ಧರ್ಮದ ಕಾಲಂನಲ್ಲಿ ಹಿಂದು ಎಂಬುದಾಗಿಯೂ ಪರಿಶಿಷ್ಟ ಪಂಗಡದ ಕ್ರಮ ಸಂಖ್ಯೆ 9ರಲ್ಲಿರುವಂತೆ ಜಾತಿ ಕಾಲಂನಲ್ಲಿ ತಳವಾರ ಎಂದು (ಕೋಡ್ ಸಂಖ್ಯೆ- ಸಿ-38.13) ಎಂದು ನಮೂದಿಸಬೇಕು. ಈ ಸಮುದಾಯ ಪರಿಶಿಷ್ಟ ಪಂಗಡದಲ್ಲಿರುವ ಕಾರಣ ಕ್ರಮ ಸಂಖ್ಯೆ 10ರಲ್ಲಿರುವ ಉಪ ಜಾತಿ ಪದ ಅನ್ವಯವಾಗುವುದಿಲ್ಲ. ಇನ್ನು ಕ್ರಮ ಸಂಖ್ಯೆ 11ರಲ್ಲಿರುವ ಪರ್ಯಾಯ ಪದಗಳ ಕಾಲಂನಲ್ಲಿ ನಾಯಕ/ ನಾಯ್ಕಡ್ (ಸಿ.38.1.2) ಎಂದು ನಮೂದಿಸಬೇಕೆಂದು ತಿಳಿಸಿದ್ದಾರೆ.

ಇನ್ನು ಈಗಾಗಲೇ ಪ್ರಮಾಣ ಪತ್ರ ಪಡೆದಿರುವುದಾಗಿ ನಮೂದಿಸಬೇಕಲ್ಲದೇ ಕ್ರಮ ಸಂಖ್ಯೆ 30ರಲ್ಲಿ ಬರುವ ಕುಲಕಸುಬು ಕಾಲಂನಲ್ಲಿ ತಳವಾರ (ಕೋಡ್-64) ಎಂದು ನಮೂದಿಸಬೇಕು. ಯಾವುದೇ ರೀತಿ ಗೊಂದಲಕ್ಕೊಳಗಾಗದೇ ಮತ್ತು ಸಮುದಾಯದ ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ತಳವಾರ ಸಮಾಜ ಪುರಾತನ ಕಾಲದಿಂದಲೂ ನಾಡಿನ ಕೋಟೆ-ಕೊತ್ತಲು ಹಾಗೂ ಗ್ರಾಮದ ರಕ್ಷಣೆಗಾಗಿ ಶ್ರಮಿಸಿದವರು. ಸಮರ ಸೇನಾನಿಗಳಾಗಿ ತಮ್ಮ ಪ್ರಾಣತ್ಯಾಗ ಮಾಡಿ ಹುತಾತ್ಮರೆನ್ನಿಸಿಕೊಂಡವರು. ದುರ್ದೈವದ ಸಂಗತಿ ಎಂದರೆ ಶತ ಶತಮಾನಗಳಿಂದ ಶೋಷಣೆಗೊಳಗಾದರೂ ಸಾಮಾಜಿಕ ನ್ಯಾಯ ಮರೀಚಿಕೆಯಾಗಿತ್ತು. ಇದೀಗ ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಸಮುದಾಯದ ದಶಕದ ಬೇಡಿಕೆ ಮತ್ತು ಹೋರಾಟಕ್ಕೆ ಫಲ ಸಿಕ್ಕಂತಾಗಿದ್ದು, ಇದೀಗ ಆ ಫಲ ಉಣ್ಣುವ ಕಾಲ ಬಂದಿದೆ. ಅದಕ್ಕಾಗಿ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.