ಇಂಡಿ ಪಟ್ಟಣದ ತಾ.ಪಂ ಕಚೇರಿ ಆವರಣದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನೀಲಗಂಗಾ ಬಬಲಾದ, ಸಂಜಯ ಖಡಗೇಕರ, ಅರ್ಚನಾ ಕುಲಕರ್ಣಿ, ಬಿ.ಎಚ್. ಕನ್ನೂರ ಇತರರಿದ್ದರು. 
ಜಿಲ್ಲೆ

ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ

ಇಂಡಿ: ತಾಲೂಕು ಸ್ವೀಪ್ ಸಮಿತಿ, ತಾ.ಪಂ ಆಡಳಿತ ವತಿಯಿಂದ ಪಟ್ಟಣದಲ್ಲಿ ಕಾಲ್ನಡಿಗೆಯ ಮೂಲಕ ಸೋಮವಾರ ಮತದಾನದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ತಾ.ಪಂ ಆವರಣದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ಕೆ ತಾ.ಪಂ ಇಒ ನೀಲಗಂಗಾ ಬಬಲಾದ ಚಾಲನೆ ನೀಡಿ ಮಾತನಾಡಿ, ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ಮತದಾನದ ಹಬ್ಬ ಆರಂಭವಾಗಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೆ ಭಾಗವಹಿಸಿ ಹಕ್ಕನ್ನು ಮಂಡಿಸಬೇಕು ಎಂದರು.

ಮತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನರೇಗಾ ಸಹಾಯಕ ನಿರ್ದೇಶಕ ಸಂಜಯ ಖಡಗೇಕರ, ಟಿಎಚ್‌ಒ ಅರ್ಚನಾ ಕುಲಕರ್ಣಿ, ಪಶು ವೈದ್ಯಾಧಿಕಾರಿ ಬಿ.ಎಚ್. ಕನ್ನೂರ, ಎಇಇ ನಾಯಕ, ಬಿ.ಜೆ. ಇಂಡಿ, ಚಂದ್ರಶೇಖರ ವಾಲಿಕಾರ, ಅರಣ್ಯ ಇಲಾಖೆಯ ರಾಜೇಂದ್ರ ಹುನ್ನೂರ, ನಂದೀಪ ರಾಠೋಡ, ಅಪ್ಪಾಶಾ ಲಾಳಸೇರಿ, ಸಿ.ಜಿ. ಪಾರೆ, ಬಸವರಾಜ ಬಬಲಾದ, ಎಚ್.ಆರ್. ರಜಪೂರ ಇತರರಿದ್ದರು.