ರಾಮದುರ್ಗದ ಪಂಚಕಟ್ಟಿಮಠ ಶಾಲೆಯಲ್ಲಿ ಪೂರ್ವ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಎಸ್.ಎಚ್.ಪ್ರಭಾಕರ, ಪಿ.ಡಿ.ಕಾಲವಾಡ, ಸುಪ್ರಿಯಾ ರಾಠೋಡ, ಭಾರತಿ ಕೂರ್ಸೆ ಇತರರು ಇದ್ದರು. 
ಜಿಲ್ಲೆ

ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿ

ರಾಮದುರ್ಗ: ನಿಯಮ ಪಾಲನೆಯೊಂದಿಗೆ ಕ್ರೀಡಾ ಮನೋಭಾವನೆಯಿಂದ ವಿದ್ಯಾರ್ಥಿಗಳು ಪ್ರತಿಯೊಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಚ್.ಪ್ರಭಾಕರ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಪಂಚಕಟ್ಟಿಮಠ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಮದುರ್ಗ ಪೂರ್ವ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಇಷ್ಠಾರ್ಥ ಕ್ರೀಡೆಯಲ್ಲಿ ನಿರಂತರ ಪರಿಶ್ರಮ ವಹಿಸಿ ತರಬೇತಿ ಪಡೆದುಕೊಂಡಲ್ಲಿ ಮಾತ್ರ ತಾಲೂಕು, ಜಿಲ್ಲಾ ಮಟ್ಟಗಳಿಗೆ ಆಯ್ಕೆಯಾಗಿ, ತಾಲೂಕಿನ ಕೀರ್ತಿ ಹೆಚ್ಚಿಸಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ದೈಹಿಕ ಶಿಕ್ಷಣಾಧಿಕಾರಿ ಪಿ.ಡಿ.ಕಾಲವಾಡ ಮಾತನಾಡಿ, ಆಟಗಳಾದ ಬುಗುರಿ, ಚಿನ್ನಿ ದಾಂಡು, ಕಣ್ಣುಮುಚ್ಚಾಲೆ ಆಟಗಳು ಮನೋಲ್ಲಾಸದ ಜತೆಗೆ ಮಗುವಿನ ದೇಹಾರೋಗ್ಯ ಕಾಪಾಡುವಂತಿದ್ದವು. ಈಗಿನ ಪೀಳಿಗೆ ಇವುಗಳೆಲ್ಲವನ್ನು ಮರೆತಿವೆ. ಇಲಾಖೆಯಿಂದ ನಡೆಯುವ ಸ್ಪರ್ಧೆಗಳಲ್ಲಿ ಮಕ್ಕಳು ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.

ಪಂಚಕಟ್ಟಿಮಠ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಎಸ್.ಪಂಚಕಟ್ಟಿಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಪ್ರಿಯಾ ರಾಠೋಡ, ಶಿಕ್ಷಕಿ ಭಾರತಿ ಕೂರ್ಸೆ, ಶ್ವೇತಾ ಹೊಸಕೋಟಿ, ಅಮೃತಾ ಬಾರಿಗಿಡದ ಇತರರು ಇದ್ದರು.