ಮಸ್ಕಿಯ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮಸ್ಕಿ ಚಾಂಪಿಯನ್ಸ್ ಲೀಗ್-2 ಕ್ರಿಕೆಟ್ ಪಂದ್ಯಾವಳಿಗೆ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬ್ಯಾಳಿ, ಭರತಕುಮಾರ ಶೇಠ್, ಮಾರಲದಿನ್ನಿ ಗ್ರಾಪಂ ಅಧ್ಯಕ್ಷ ಭೀರಪ್ಪ,ಮೌನೇಶ ಮುರಾರಿ, ಪ್ರಥಮ ದರ್ಜೆ ಗುತ್ತಿಗೆದಾರ ಪ್ರಭುದೇವ ಇತರರಿದ್ದರು. 
ಜಿಲ್ಲೆ

ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಪಾಲ್ಗೊಳ್ಳಿ

ಮಸ್ಕಿ: ಮಾನಸಿಕ ಆರೋಗ್ಯ ಹಾಗೂ ಸದೃಢ ದೇಹಕ್ಕೆ ಕ್ರೀಡೆಗಳು ಅವಶ್ಯಕವಾಗಿದ್ದು, ಯುವಕರು ಸ್ಪರ್ಧಾತ್ಮಕ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ದೇವನಾಂಪ್ರಿಯ ಗೆಳೆಯರ ಬಳಗದಿಂದ ಆಯೋಜಿಸಿರುವ ಮಸ್ಕಿ ಚಾಂಪಿಯನ್ಸ್ ಲೀಗ್-2 ಕ್ರಿಕೆಟ್ ಪಂದ್ಯಾವಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಸೋಲು-ಗೆಲುವು ಸಮನಾಗಿ ಸ್ವೀಕರಿಸಬೇಕು. ಕ್ರೀಡೆಗಳಿಂದ ಮನಸ್ಸು ವಿಕಸನಗೊಳ್ಳುತ್ತದೆ. ಆಟದಲ್ಲಿ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ಗೊಂದಲಕ್ಕೆ ಅವಕಾಶ ನೀಡದೆ ಗೌರವಿಸಬೇಕು ಎಂದು ತಿಳಿಸಿದರು. ಪುರಸಭೆ ಸದಸ್ಯ ಮೌನೇಶ ಮುರಾರಿ ಮಾತನಾಡಿದರು.

ಎಂಟು ತಂಡಗಳ ಪೈಕಿ ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಪ್ರಥಮ ಬಹುಮಾನ 55,555 ರೂ. ನಗದು ಹಾಗೂ ಟ್ರೋಫಿಯನ್ನು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ದ್ವಿತೀಯ ಬಹುಮಾನ 33,333 ರೂ. ನಗದು ಹಾಗೂ ಟ್ರೋಫಿಯನ್ನು ಮಸ್ಕಿ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಭುದೇವ, ತೃತೀಯ ಬಹುಮಾನ 22,222 ರೂ. ನಗದು ಹಾಗೂ ಕಪ್ ಅನ್ನು ಬಸವರಾಜ ಬಾಳೇಕಾಯಿ ನೀಡಲಿದ್ದಾರೆ.

ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬ್ಯಾಳಿ, ಭರತಕುಮಾರ ಶೇಠ್, ಮಾರಲದಿನ್ನಿ ಗ್ರಾಪಂ ಅಧ್ಯಕ್ಷ ಭೀರಪ್ಪ, ಎಂಟು ತಂಡದ (ಪ್ರಾಂಚೈಸಿ) ಮಾಲೀಕರಾದ ಮಹಾಂತೇಶ ಪಾಟೀಲ್, ಅಶೋಕ ಮುರಾರಿ, ಗೌಸ್‌ಪಾಷಾ, ಶಿವರಾಜ ಪಾಟೀಲ್, ಬಸವರಾಜ ಬುಕ್ಕಣ್ಣ, ಅಕ್ಷಯ ಕುಮಾರ, ಬಸವರಾಜ ಕೊಠಾರಿ, ನಟರಾಜ, ಶಿವಪ್ರಸಾದ, ಮೋಹನ ಮುರಾರಿ ಇತರರಿದ್ದರು.