ಕಂಪ್ಲಿ: ಸೋಲು ಗೆಲುವು ಎನ್ನದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಇದನ್ನೂ ಓದಿ:ಒತ್ತಡ ನಿವಾರಿಸಲು ಕ್ರೀಡಾಕೂಟ ಸಹಕಾರಿ
ನಗರದ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಆವರದಲ್ಲಿ ಶಿಕ್ಷಣ ಇಲಾಖೆ, ಮದರ್ ತೆರೇಸಾ ಪಿಯು ಕಾಲೇಜು, ವಿನೂತನ ಮಹಿಳಾ ಪದವಿ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಎಸ್‌ಎಸ್ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ ಜಿ.ನಾಯಕ ಪ್ರತಿಜ್ಞಾವಿಧಿ ಬೋದಿಸಿದರು. ತಾಲೂಕಿನ 7 ಕಾಲೇಜುಗಳ 450 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಸಕ ಜೆ.ಎನ್.ಗಣೇಶ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಪ್ರಮುಖರಾದ ಪ್ರಕಾಶ ಜಿ.ನಾಯಕ, ಮದ್ದಾನಪ್ಪ ಬಿಡಿನಾಳ್, ಜಿ.ಮಹಾಬಲೇಶ್ವರಪ್ಪ, ಅಶೋಕರೆಡ್ಡಿ, ಟಿ.ಎಂ.ಬಸವರಾಜ, ಪಿ.ಮೂಕಯ್ಯಸ್ವಾಮಿ, ಮಹ್ಮದ್‌ಶಫಿ, ತಾರಾ ನಂದ್ಯಾಲ, ಸಿದ್ದಪ್ಪ ಪರಮೇಶ್ವರ, ಸುಜಾತಾ, ಬಸವರಾಜ ನಾಯಕ, ಬಸವರಾಜಸ್ವಾಮಿ, ಪಿ.ಕೆ.ಅಜೀಜ್ ಉಲ್‌ಹಕ್ ಇತರರಿದ್ದರು.