ಜಿಲ್ಲೆ

ಬೌದ್ಧಿಕಮಟ್ಟ ಹೆಚ್ಚಲು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ

Gadag - Desk - Tippanna Avadoot

ಸವಣೂರ: ಶಿಕ್ಷಣ ಕಲಿಕೆಯ ಜತೆಗೆ ಮಕ್ಕಳು ಬಾಲ್ಯಾವಸ್ಥೆಯಲ್ಲಿ ಸಂಗೀತ, ನೃತ್ಯ, ಗಾಯನದಂಥ ಅನೇಕ ಪಠ್ಯೇತರ ಚಟುವಟಿಕೆಯೊಂದಿಗೆ ಬೆಳೆದಾಗ ಅವರಲ್ಲಿ ಬೌದ್ಧಿಕಮಟ್ಟ ಹೆಚ್ಚುತ್ತದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ನಂದೀಶ ಹಾವಣಗಿ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕ ಮಟ್ಟದ ದೇಶಭಕ್ತಿ ಗೀತೆಗಳ ಗೀತಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಶಾಲೆಯ ಮುಖ್ಯ ಗುರು ಬಿ.ಎಂ. ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ವಿ.ಎಸ್. ಸಿಂಧೂರ, ಎಸ್​ಡಿಎಂಸಿ ಅಧ್ಯಕ್ಷ ಅನ್ವರಭಾಷಾ ಕರ್ಜಗಿ,ಸಾಧೀಕಸಾಬ ಕೊಡೇನವರ, ನಂದೀಶ ಗೊಡ್ಡೆಮ್ಮಿ, ಜಿಲ್ಲಾ ಸಂಘಟನಾಧಿಕಾರಿ ಮಲ್ಲೇಶಪ್ಪ, ಹಿರಿಯ ಸ್ಕೌಟರ್ ಯಲ್ಲಪ್ಪ ಕುತನಿ ಇದ್ದರು. ಎಸ್.ಕೆ. ದಿವಾಕರ ಮೂರ್ತಿ, ಸಿದ್ದನಗೌಡ ನಿರ್ವಹಿಸಿದರು.