ಮೂಡಲಗಿ: ಪ್ರಸ್ತುತ ಕ್ರೀಡೆಗಳಿಗೆ ಬಹಳಷ್ಟು ಪ್ರಾಮುಖ್ಯತೆ ಇದ್ದು, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಡಿಡಿಪಿಯು ಪಿ.ಐ.ಭಂಡಾರಿ ಹೇಳಿದರು.
ಸಮೀಪದ ಕಲ್ಲೋಳಿಯ ಬಸವೇಶ್ವರ ಶಿಣ ಸಂಸ್ಥೆ ಹಾಗೂ ಶಾಲಾ ಶಿಣ ಮತ್ತು ಸಾರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ಚೇರ್ಮನ್ ರಮೇಶ ಬೆಳಕೂಡ ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯ ಸೌಲಭ್ಯ ನೀಡಲಾಗುವುದು ಎಂದರು.
ಪಪಂ ಮುಖ್ಯಾಧಿಕಾರಿ ಸಿ.ಎಂ.ಮುಗಳಕೋಡ ಮಾತನಾಡಿದರು. ಶಿವ ಕೋ&ಆಪ್ ಬ್ಯಾಂಕ್ ಅಧ್ಯ ಗಿರಿಮಲ್ಲಪ್ಪ ಸವಸುದ್ದಿ ಕ್ರೀಡಾ ಜ್ಯೋತಿ ಸ್ವಾಗತಿಸಿದರು. ಜವಳಿ ವ್ಯಾಪಾರಸ್ಥ ವಿನೋದ ಅಂಕದವರ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಟ್ರೋಫಿ ದೇಣಿಗೆ ನೀಡಿದರು. ಪ್ಯಾರಾ ಟೇಕ್ವಾಂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಲಕ್ಷಿ$್ಮ ರಡ್ಡೇರಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಹೇಶ ಬೆಳಗಾವ್ಕರ್, ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ, ಪ್ರಾಚಾರ್ಯರಾದ ಡಾ.ಸಂಗಮೇಶ ಹೂಗಾರ, ಜೆ.ಪಿ ಮುತ್ನಾಳ, ತಾಲೂಕು ಕ್ರೀಡಾ ಸಂಯೋಜಕ ಎಲ್.ಆರ್.ಧರ್ಮಟ್ಟಿ, ಗುರುರಾಜ ಕಡಕಬಾವಿ, ದೈಹಿಕ ಶಿಕ್ಷಣ ಶಿಕ ಶಾನೂರ್ ದಾಸನಾಳ ಇತರರಿದ್ದರು. ವಿಠ್ಠಲ ಕೋಂಗನಳ್ಳಿ ಸ್ವಾಗತಿಸಿದರು. ರಮೇಶ ಹೆಬ್ಬಾಳ ನಿರೂಪಿಸಿದರು. ಕೆ.ಜಿ.ಪಾತ್ರೋಟ್ ವಂದಿಸಿದರು.