ಸರಗೂರು: ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಹುಚ್ಚಪ್ಪ ತಿಳಿಸಿದರು.
ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಮೊಬೈಲ್, ಟಿವಿಗೆ ಅಂಟಿಕೊಳ್ಳದೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯಶಿಕ್ಷಕ ನಾರಾಯಣ್‌ಮೂರ್ತಿ, ಮಂಜುನಾಥ, ಎಸ್‌ಡಿಎಂಸಿ ಅಧ್ಯಕ್ಷ ಸಣ್ಣಸ್ವಾಮಿ, ನಾಡಗೌಡರು ರಮೇಶ್, ಸಮಿತಿ ಸದಸ್ಯರಾದ ಬಾಲಕೃಷ್ಣ, ಸೋಮಣ್ಣ, ಕವಿತಾ ರಾಮಚಂದ್ರ, ಭಾಗ್ಯಾ ಜಲೇಂದ್ರ, ಮಹೇಶ್ವರಿ ಕಾಳಸ್ವಾಮಿ, ನಾಗಮ್ಮ, ಭಾಗ್ಯಾ ಮಹದೇವ ಮೂರ್ತಿ, ಜಗನಾಥ್, ರಾಜೇಂದ್ರ, ಭಾಸ್ಕರ್, ಶಿಕ್ಷಕರು ನಂಜುಂಡಪ್ಪ, ರಾಜೇಂದ್ರ ಕುಮಾರ್, ಶಿವರಾಜು, ಮಹದೇವಸ್ವಾಮಿ, ಮಂಜುನಾಥ, ನಾಗೇಂದ್ರ ಇತರರು ಇದ್ದರು.