Participate in an imaginary parade. 
ಜಿಲ್ಲೆ

ಕಲ್ಪಿತ ಕವಾಯತಿನಲ್ಲಿ ಭಾಗವಹಿಸಿ

ಗಿರೀಶ ಸಗರ

ವಿಜಯಪುರ: ಗೃಹ ಸಚಿವಾಲಯವು ಮೇ 7 ರಂದು ದೇಶಾದ್ಯಂತ ಹಮ್ಮಿಕೊಂಡಿರುವ ನಾಗರಿಕ ರಕ್ಷಣಾ ಕಲ್ಪಿತ ಕವಾಯತಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಉತ್ಸಾಹದಿಂದ ಭಾಗವಹಿಸುವಂತೆ ಎಬಿವಿಪಿ ಮನವಿ ಮಾಡಿದೆ.

ಕಾಶ್ಮೀರದ ಪಹಲ್ಗಾಮ್​ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ, ಹೆಚ್ಚುತ್ತಿರುವ ಗಡಿಯಾಚೆಗಿನ ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಕಲ್ಪಿತ ಕವಾಯತು ನಾಗರಿಕರಲ್ಲಿ ಆತ್ಮಸ್ಥೆರ್ಯ ತುಂಬುವ ಒಂದು ಪ್ರಮುಖ ಹೆಜ್ಜೆಯಾಗಿದೆ.

ಎಚ್ಚರಿಕೆ ಸೈರನ್​ ಮೊಳಗಿಸುವುದು, ಬ್ಲಾಕೌಟ್​, ನಾಗರಿಕರನ್ನು ಸುರತವಾಗಿ ಸ್ಥಳಾಂತರಿಸುವ ಕುರಿತು ಪೂರ್ವಾಭ್ಯಾಸ ಮತ್ತು ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಎಬಿವಿಪಿ ತಿಳಿಸಿದೆ.