ಗಂಗಾವತಿ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ.ಪೂ.ಕಾಲೇಜುಗಳ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಬಾಲಕಿಯರ ಎಂಎನ್‌ಎಂ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಟಿ.ಸಿ.ಶಾಂತಪ್ಪ ಉದ್ಘಾಟಿಸಿದರು. ಬಾಲಕರ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ, ಉಪನ್ಯಾಸಕರಾದ ಸೋಮಶೇಖರಗೌಡ, ಡಾ.ಲಿಂಗಣ್ಣ ಜಂಗಮರಳ್ಳಿ , ಲಲಿತಾ ಕಂದಗಲ್ ಇತರರಿದ್ದರು. 
ಜಿಲ್ಲೆ

ಪಠ್ಯದ ಜತೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ

ರುದ್ರಪ್ಪ ವಾಲಿ

ಗಂಗಾವತಿ: ಪ್ರತಿಭೆಗಳ ಅನಾವರಣಕ್ಕೆ ಸಾಂಸ್ಕೃತಿಕ ಸ್ಪರ್ಧೆಗಳು ಪೂರಕವಾಗಿದ್ದು, ಕಲೆ ಆಯ್ಕೆ ವಿಷಯದಲ್ಲಿ ಹೆಚ್ಚು ಕೇಂದ್ರಿಕೃತಗೊಳಿಸಬೇಕಿದೆ ಎಂದು ಬಾಲಕಿಯರ ಎಂಎನ್‌ಎಂ ಸರ್ಕಾರಿ ಪ.ಪೂ.ಕಾಲೇಜು ಪ್ರಾಚಾರ್ಯ ಟಿ.ಸಿ.ಶಾಂತಪ್ಪ ಹೇಳಿದರು.

ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪ.ಪೂ.ಕಾಲೇಜುಗಳ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಬೇಕಿದ್ದು, ಕ್ರೀಯಾಶೀಲತೆಯ ಭಾಗವಹಿಸುವಿಕೆ ಮನೋಲ್ಲಾಸ ಹೆಚ್ಚಿಸಲಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಬಾಲಕರ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ ಬಸಪ್ಪ ನಾಗೋಲಿ ಮಾತನಾಡಿ, ಆಸಕ್ತಿಯಂತೆ ಕಲಾ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ವಿಭಿನ್ನತೆಯತ್ತ ಗಮನಹರಿಸುವಂತೆ ಸಲಹೆ ನೀಡಿದರು.

11 ಸ್ಪರ್ಧೆಗಳಲ್ಲಿ ತಾಲೂಕಿನ ವಿವಿಧ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂಎಸ್‌ಎಂಎಸ್ ಪ.ಪೂ.ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನಯ್ಯಸ್ವಾಮಿ, ಗ್ರಂಥಪಾಲಕ ರಮೇಶ ಗಬ್ಬೂರು ಇತರರಿದ್ದರು.