ಜಿಲ್ಲೆ

ಕಲಿಕೆಯಲ್ಲಿ ಆಸಕ್ತಿ ಇದ್ದರೆ ಎಲ್ಲ ಭಾಷೆಗಳೂ ಸರಳ

Chitradurga

ಚಿತ್ರದುರ್ಗ: ಕಲಾ ವಿಭಾಗದ ಮಕ್ಕಳಿಗೆ ಇಂಗ್ಲಿಷ್ ವಿಷಯ ಕಬ್ಬಿಣ ಕಡಲೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುವ ನಿಟ್ಟಿನಲ್ಲಿ ಇಂತಹ ಕಾರ‌್ಯಕ್ರಮಗಳ ಅಗತ್ಯವಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ರಾಜು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ,ಜಿಲ್ಲಾ ಪದವಿ ಪೂರ್ವ ಇಂಗ್ಲಿಷ್ ಉಪನ್ಯಾಸಕರ ವೇದಿಕೆ,ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಇನ್ನರ್‌ವೀಲ್ ಕ್ಲಬ್ ಸಹಯೋಗದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವದ ಅತ್ಯಂತ ಕಿರಿಯ ಮುಖ್ಯಶಿಕ್ಷ ಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಶ್ಚಿಮ ಬಂಗಾಳ ಮುರ್ಷಿದಾಬಾದ್‌ನಬಾಬರ್‌ಅಲಿ ಅವರಿಗೆ ಸನ್ಮಾನ,ಸಂವಾದ ಹಾಗೂ ಪ್ರತಿಭಾ ಪುರಸ್ಕಾರ

ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ಕಲಿಕೆಯಲ್ಲಿ ಆಸಕ್ತಿ ಇದ್ದರೆ ಎಲ್ಲಾ ಭಾಷೆಗಳನ್ನು ಸರಳವಾಗಿ ಕಲಿಯಬಹುದು.

ಬಾಬರ್‌ಅಲಿ ನಮ್ಮ ಜಿಲ್ಲೆಗೆ ಬಂದಿರುವುದು ಸಂತಸ ತಂದಿದೆ. ಅವರೊಂದಿಗೆ ಸಂವಾದದಿಂದ ಈ ಬಾರಿ ದ್ವಿತೀಯ ಪಿಯುಸಿ ಫಲಿ ತಾಂಶದಲ್ಲಿ ಜಿಲ್ಲೆಗೆ 10ನೇ ಸ್ಥಾನ ಲಭಿಸಲಿ ಎಂದು ಆಶಿಸಿದರು. ಬಾಬರ್‌ಅಲಿ ಮಾತನಾಡಿ,ಉಚಿತ ಶಿಕ್ಷಣ ನೀಡಲು ಪ್ರಾರಂಭಿಸಿದರ ಪ್ರತಿ ಫಲವೇ ಈಗಿನ ಆನಂದ ಶಿಕ್ಷಾ ನಿಕೇತನ ಶಾಲೆ ಎಂದರು.

ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಜಿಲ್ಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪಂಚಮಿ, ಸಂಗೀತಾ, ಎಂ.ಎಸ್.ಚಿನ್ಮಯಿ, ಪಿ.ವಿ.ಶ್ವೇತಾ,ಫಾಲಾಕ್ಷ,ಎಂ.ಎ.ಶಿವಕುಮಾರ,ಜಿ.ಎಂ.ಅಖಿಲಾ,ಕೆ.ಒ.ಭವಾನಿ,ಟಿ.ವಿದ್ಯಾ,ಸಿ.ಎಂ. ಶ್ವೇತಾ, ಯು.ಲಾವಣ್ಯ,ಟಿ.ಜಿ.ತನುಶ್ರೀ, ಬಿ.ಎಸ್.ಕಾವೇರಿ,ಎಸ್.ಎಸ್.ಮುಕ್ತಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಪೂ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ಎನ್.ಕೃಷ್ಣಪ್ರಸಾದ್,ಕೆ.ವೀರಭದ್ರಪ್ಪ, ಜಿಲ್ಲಾ ಪದವಿ ಪೂರ್ವ ಪ್ರಾಚಾರ‌್ಯರ ಸಂಘ ದ ಅಧ್ಯಕ್ಷ ಕೆ.ನಾಗಣ್ಣ,ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್ ಮಲ್ಲೇಶಪ್ಪ, ಜಿಲ್ಲಾ ಪದವಿಪೂರ್ವ ಇಂಗ್ಲಿಷ್ ಉಪ ನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ವಿಜಯ್,ಜಿಲ್ಲಾ ಪದವಿ ಪೂರ್ವ ಇಂಗ್ಲಿಷ್ ಉಪನ್ಯಾಸಕರ ವೇದಿಕೆ ಕಾರ್ಯಕ್ರಮ ಸಂಯೋಜಕ ನಾಗರಾ ಜ್‌ಬೆಳಗಟ್ಟ,ಎಂ.ಜಿ.ರಂಗಸ್ವಾಮಿ,ಗಣೇಶ್,ಡಾ.ಎಚ್.ಗೋಪಾಲಯ್ಯ,ಎಂ.ರವೀಶ್,ಸಿ.ಚಂದ್ರಶೇಖರಪ್ಪ,ಆರ್.ಅನಿಲ್‌ಕುಮಾರ್,ಡಾ. ಹೇಮಂತ್‌ರಾಜು ಮತ್ತಿತರರು ಇದ್ದರು.