ಜಿಲ್ಲೆ

ಪಾರ್ಟ್‌ಟೈಮ್ ಕೆಲಸ ಆಸೆ ತೋರಿಸಿ ವಂಚನೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಪಾರ್ಟ್‌ಟೈಮ್ ಕೆಲಸದ ಆಸೆಯಿಂದ ನಗರದ ಸಲ್ಮಾನ್ ಪಾಷ ಎಂಬುವವರು 1.27 ಲಕ್ಷ ರೂ. ಕಳೆದುಕೊಂಡಿದ್ದಾರೆ.


ಪಾರ್ಟ್‌ಟೈಮ್ ಕೆಲಸ ಇರುವುದಾಗಿ ಅಪರಿಚಿತರಿಂದ ಮೊಬೈಲ್‌ನಲ್ಲಿ ಸಂದೇಶ ಬಂದಿದೆ. ಮೊದಲು ಪಾಷ ಅವರ ಬ್ಯಾಂಕ್ ಖಾತೆಗೆ 150 ರೂ., 200 ರೂ. ಜಮಾ ಮಾಡಲಾಗಿದೆ. ನಂತರ ಇನ್ವೆಸ್ಟ್‌ಮೆಂಟ್ ಎಂದು ಹೇಳಿ ಇವರಿಂದ 1.27 ಲಕ್ಷ ರೂ.ಗಳನ್ನು ವಂಚಕರು ಹಾಕಿಸಿಕೊಂಡಿದ್ದಾರೆ.

ಬಳಿಕ ಯಾವುದೇ ಲಾಭವನ್ನೂ ನೀಡದೆ ಇರುವುದರಿಂದ ತಾವು ಮೋಸ ಹೋಗಿರುವುದು ತಿಳಿದು ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.