ಜಿಲ್ಲೆ

ಪಾರ್ಟ್‌ಟೈಮ್ ಜಾಬ್ ಹೆಸರಲ್ಲಿ 5.85 ಲಕ್ಷ ರೂ. ವಂಚನೆ

ಮಂಗಳೂರು: ಪಾರ್ಟ್‌ಟೈಮ್ ಜಾಬ್ ಹೆಸರಲ್ಲಿ ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ನೀಡಿ 5.85 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅ.30ರಂದು ದೂರುದಾರರ ವಾಟ್ಸಾೃಪ್ ನಂಬರ್‌ಗೆ ಬಂದ ಮೆಸೇಜ್‌ನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಿ ಹಣ ಗಳಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ದೂರುದಾರರು ಹಣ ಪಾವತಿಸಿ ಟಾಸ್ಕ್ ಪೂರ್ಣಗೊಳಿಸಿದ್ದರು. ಅವರಿಂದ ಹಂತ ಹಂತವಾಗಿ ಅ.30ರಿಂದ ನ.13ರವರೆಗೆ ಒಟ್ಟು 5.85 ಲ.ರೂ.ಗಳನ್ನು ಪಡೆದುಕೊಂಡು ಅನಂತರ ಯಾವುದೇ ಹಣ ಮರಳಿಸದೆ ವಂಚಿಸಲಾಗಿದೆ.