ಮಂಗಳೂರು: ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ಹೇಳಿ ಒಟ್ಟು 1,06,020 ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಮೊಬೈಲ್‌ಗೆ ಪಾರ್ಟ್ ಟೈಮ್ ಜಾಬ್ ಬಗ್ಗೆ ಜಾಹೀರಾತು ಬಂದಿದ್ದು, ಅದರ ವಾಟ್ಸಪ್ ಲಿಂಕ್‌ಗೆ ಕ್ಲಿಕ್ ಮಾಡಿ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ಉದ್ಯೋಗದ ಮಾಹಿತಿ ಕೇಳಿದ್ದಾರೆ. ಆರೋಪಿಗಳು ಅಮೆಜಾನ್‌ನಲ್ಲಿ ಪಾರ್ಟ್ ಟೈಮ್ ಕೆಲಸ ನೀಡಿ ಪ್ರತಿ ದಿನ 3ರಿಂದ 8 ಸಾವಿರ ರೂ. ನೀಡುವುದಾಗಿ ತಿಳಿಸಿ ಲಿಂಕ್ ಕಳುಹಿಸಿ ಐಡಿ ರಚಿಸಲು ತಿಳಿಸಿದ್ದಾರೆ. ದೂರುದಾರರ ಈ ಲಿಂಕ್‌ನಲ್ಲಿ ತಮ್ಮ ವಿವರಗಳನ್ನು ನಮೂದಿಸಿ ಅಮೆಜಾನ್ ಐಡಿ ರಚಿಸಿದ್ದಾರೆ. ಆರೋಪಿಗಳು ಐಡಿಗೆ 80 ರೂ. ಜಮೆ ಮಾಡಿದ್ದು, ನಂತರ ಮುಂದಿನ ಹಂತಕ್ಕೆ ತಲುಪಲು 120 ರೂ. ರೀಚಾರ್ಜ್ ಮಾಡಲು ಹೇಳಿದ್ದಾರೆ. ಮುಂದುವರಿದು 500 ರೂ., 1100 ರೂ., 3000 ರೂ. ಒಟ್ಟು ಜ.4ರಿಂದ 6ರ ನಡುವೆ 1,06,020 ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.