ಜಿಲ್ಲೆ

ನಾಯಕತ್ವ ಗುಣ ಬೆಳೆಸಲು ಸಂಸತ್ ರಚನೆ

Mysuru - Desk - Naveen Kumar H P


ಸುಂಟಿಕೊಪ್ಪ : ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಶಾಲಾ ಸಂಸತ್ ರಚನೆ ಮಾಡಲಾಗುತ್ತಿದೆ ಎಂದು ಸಂತ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ರೇ.ಫಾ.ವಿಜಯ್‌ಕುಮಾರ್ ಹೇಳಿದರು.


ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್‌ಗೆ ಆಯ್ಕೆಗೊಂಡ ನಾಯಕ ಮತ್ತು ನಾಯಕಿಯರಿಗೆ ಶನಿವಾರ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.


ನಾಯಕತ್ವ ಮತ್ತು ಅದರ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.


ಸೋಮವಾರಪೇಟೆ ಸಂತ ಜೋಸೆಫರ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ರೇ.ಫಾ.ಅವಿನಾಶ್ ಮಾತನಾಡಿದರು.


ಶಾಲಾ ನಾಯಕನಾಗಿ ಭರತೇಶ್, ನಾಯಕಿಯಾಗಿ ಪಲ್ಲವಿ, ಪದವಿ ಪೂರ್ವ ಕಾಲೇಜಿಗೆ ನಾಯಕನಾಗಿ ಡಿಂಪಲ್ ತಿಮ್ಮಯ್ಯ, ನಾಯಕಿಯಾಗಿ ಡಿ.ಡಿ.ಸೃಜನ್ ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಅತಿಥಿಗಳಿಗೆ ಗೌರವ ಸಮರ್ಪಣೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂದವು.


ಸಂತ ಅಂತೋಣಿ ಶಾಲೆಯ ಶಿಕ್ಷಕಿ ಸಿಸ್ಟರ್ ಜೋವಿಟಾ ವಾಜ್, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸೇಲ್ವರಾಜ್, ಶಿಕ್ಷಕರಾದ ಸೋಪಿಯಾ, ತನುಜಾ, ಸಹನಾ, ರೀಟಾ, ಬಿಜು ವರ್ಗಿಸ್ ಇತರರು ಇದ್ದರು.