ಜಿಲ್ಲೆ

ಓಎಲ್‌ವಿ ಶಾಲೆಯಲ್ಲಿ ಸಂಸತ್ ಚುನಾವಣೆ

ಪ್ರಸಿನ್ ಕೆ.ಆರ್

ಸೋಮವಾರಪೇಟೆ: ಓಎಲ್‌ವಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಇತ್ತೀಚೆಗೆ ನಡೆಯಿತು.

ವಿದ್ಯಾರ್ಥಿಗಳು ಬಹಿರಂಗ ಪ್ರಚಾರ ಮಾಡಿದರು. ಶಾಲೆಯ ವಿದ್ಯಾರ್ಥಿಗಳಿಗೆ ಸಂಸದೀಯ ಮಾದರಿಯ ಚಟುವಟಿಕೆಗಳು ಹಾಗೂ ಸಾರ್ವತ್ರಿಕ ಚುನಾವಣೆಗಳು ನಡೆಯುವ ರೀತಿಯನ್ನು ತಿಳಿಸಿಕೊಟ್ಟು ಅವರನ್ನು ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಅರಿವು ಮೂಡಿಸಲಾಯಿತು ಎಂದು ಮುಖ್ಯಶಿಕ್ಷಕಿ ಸಿಸ್ಟರ್ ರಕ್ಷಿತಾ ಹೇಳಿದರು.

ಶಿಕ್ಷಕ ಸಂಪತ್ ಕುಮಾರ್, ಸಿ.ಜಿ.ದಿನೇಶ್, ಮೊನಿಶಾ ಡಿಸೋಜ, ಅಶ್ವಿನಿ, ಹೆಲನ್ ಕ್ರಸ್ತಾ, ಮಿಂಚಿತಾ, ಪೂಜಾ, ಡೀಲಾಕ್ಷಿ ಇದ್ದರು. ಜೂ.15ರಂದು ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.