ಜಿಲ್ಲೆ

ಆದರ್ಶ ವಿದ್ಯಾಲಯದಲ್ಲಿ ಸಂಸತ್ ಚುನಾವಣೆ


ಹೊಳೆನರಸೀಪುರ : ಮಕ್ಕಳಲ್ಲಿ ಚುನಾವಣೆ, ಸಂಸತ್ ಹಾಗೂ ಸಂವಿಧಾನದ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಆದರ್ಶ ವಿದ್ಯಾಲಯದಲ್ಲಿ 2024-25 ಸಾಲಿನ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು ಎಂದು ಶಾಲಾ ಶಿಕ್ಷಕ ಎಚ್.ಆರ್.ಮೋಹನ್ ಕುಮಾರ್ ತಿಳಿಸಿದ್ದಾರೆ.


ಶುಕ್ರವಾರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಂಸತ್ ಚುನಾವಣೆಯಲ್ಲಿ ಜಯಶೀಲರಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಸಮಾಜ ವಿಜ್ಞಾನ ವಿಭಾಗದ ಶಿಕ್ಷಕ ಲೋಕೇಶ್, ಮುಖ್ಯ ಚುನಾವಣಾ ಆಯುಕ್ತರಾಗಿ ಮತ್ತು ಉಪ ಚುನಾವಣಾ ಆಯುಕ್ತರಾಗಿ ಸುಜಾತಾ ಅವರನ್ನು ನೇಮಿಸಲಾಗಿತ್ತು. ಇವರು ಅರ್ಥಪೂರ್ಣವಾಗಿ ಕಾನೂನು ರೀತಿಯಲ್ಲಿಯೇ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕ ಲೋಕೇಶ್ ಮಾತನಾಡಿದರು. 21 ವಿದ್ಯಾರ್ಥಿಗಳು ದೇವರ ಹಾಗೂ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಕರಾದ ರಾಕೇಶ್, ರವಿ, ರಾಜೇಶ್, ಎಂ.ಪಿ.ಪುಷ್ಪಲತಾ, ರುದ್ರಪ್ಪಹಳ್ಳಿ, ಪ್ರಭು ಶಂಕರ್, ಶರಣಬಸಪ್ಪ, ನಳಿನಾ, ಪ್ರಭಾಕರ್ ಇತರರು ಇದ್ದರು.