ಚನ್ನಪಟ್ಟಣ: ನಗರಸಭೆಯಿಂದ ಲಾಂತರ ರೂ. ವೆಚ್ಚ ಮಾಡಿ ನಗರದ ಹಲವು ಕಡೆ ನಿರ್ಮಿಸಿದ್ದ ಕಿರು ಉದ್ಯಾನಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ.
ಹೌದು.., ನಗರವಾಸಿಗಳ ವಾಯುವಿಹಾರ ಹಾಗೂ ಮಕ್ಕಳ ಆಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಗರದ ಹಲವು ಬಡಾವಣೆಗಳಲ್ಲಿ ಲಭ್ಯವಿದ್ದ ಜಾಗಗಳಲ್ಲಿ ಸರಳ ಹಾಗೂ ಸುಂದರವಾದ ಕಡೆ ಕಿರು ಉದ್ಯಾನವನ ನಿರ್ಮಿಸಲಾಗಿತ್ತು. ಆದರೆ, ಬಹುತೇಕ ಉದ್ಯಾನಗಳು ಸದ್ಯ ಪಾಳುಬಿದ್ದ ಕೊಂಪೆಯಾಗಿ ಬದಲಾಗಿವೆ. ಉದ್ಯಾನದಲ್ಲಿ ನೆಟ್ಟ ಅಲಂಕಾರಿಕ ಗಿಡಗಳು ಮಾಯವಾಗಿ, ಇದೇನು ಉದ್ಯಾನವನವೋ ಅಥವಾ ಪೊದೆಯೋ ಎಂಬ ಅನುಮಾನ ಮೂಡಿಸುವಷ್ಟು ಹಾಳಾಗಿರುವ ಜತೆಗೆ ಲಾಂತರ ಹಣವೂ ಪೋಲಾಗಿದೆ.
ನಗರದ ಚಿಕ್ಕಮಳೂರು, ಗೃಹ ಮಂಡಳಿ ಬಡಾವಣೆ, ಮಂಗಳವಾರಪೇಟೆ, ಸಿಎಂಸಿ ಬಡಾವಣೆ, ರಾಜಾಕೆಂಪೇಗೌಡ ಬಡಾವಣೆ, ಕಣ್ವ ಬಡಾವಣೆ, ಕನಕನಗರ, ಹೆದ್ದಾರಿಯ ಸ್ಪನ್ ಸಿಲ್ಕ್ ಮಿಲ್ ಪಕ್ಕ ಸೇರಿ ಸರ್ಕಾರಿ ಜಾಗಗಳಲ್ಲಿ ಕಿರು ಉದ್ಯಾನ ನಿರ್ಮಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಬಹುತೇಕ ಉದ್ಯಾನವನಗಳಲ್ಲಿ ಗಿಡಗಂಟಿ ಬೆಳೆದು ಹಾವು, ಚೇಳು ಹಾಗೂ ಕಪ್ಪೆಗಳ ಆವಾಸ ಸ್ಥಾನವಾಗಿ ಬದಲಾಗಿವೆ.
ತ್ಯಾಜ್ಯ ಹಾಕುವ ತಾಣ ನಗರದ ಚಿಕ್ಕಮಳೂರಿನ ಕಣ್ವ ನದಿ ಪಕ್ಕದಲ್ಲಿ ನಿರ್ಮಿಸಿರುವ ಉದ್ಯಾನವನ ಸೇರಿ ಬಹುತೇಕ ಉದ್ಯಾನಗಳು ಕಸ ಹಾಕುವ ತಾಣವಾಗಿ ಮಾರ್ಪಾಡಾಗಿವೆ. ವಾಕಿಂಗ್ ಮಾಡಲು ನಿರ್ಮಾಣ ಮಾಡಿರುವ ವಾಕಿಂಗ್ ಪಾಥ್ನಲ್ಲಿ ಕಸಕಡ್ಡಿ ತುಂಬಿಕೊಂಡಿದೆ. ಉದ್ಯಾನಗಳ ಆರಂಭದಲ್ಲಿ ಹಲವರು ವಾಕಿಂಗ್ ಮಾಡಲು ಇವುಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ, ನಿರ್ವಹಣೆ ಇಲ್ಲದ ಇವುಗಳ ಕಡೆ ಸಾರ್ವಜನಿಕರು ತಲೆಹಾಕದ ಹಿನ್ನೆಲೆಯಲ್ಲಿ ಬಹುತೇಕ ಉದ್ಯಾನಗಳು ಪಾಳುಕೊಂಪೆಯಾಗಿವೆ. ನಿರ್ವಹಣೆಗೆ ಆಗ್ರಹ ನಿರ್ವಹಣೆ ಮಾಡಬೇಕಾದ ನಗರಸಭೆ ಸಿಬ್ಬಂದಿ ರ್ನಿಲ್ಯದಿಂದ ಉದ್ಯಾನವನಗಳು ಹಾಳಾಗಿವೆ ಎನ್ನುವುದು ನಾಗರಿಕರ ಆರೋಪ. ಸಾರ್ವಜನಿಕರ ಉಪಯೋಗಕ್ಕೆಂದು ಉದ್ಯಾನ ನಿರ್ಮಿಸಿದ ಮೇಲೆ ಅವುಗಳ ನಿರ್ವಹಣೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕು. ಉದ್ಯಾನದಲ್ಲಿ ಕಳೆ ಗಿಡ ಬೆಳೆಯಲು ಬಿಟ್ಟು, ಕಸಕಡ್ಡಿ ತುಂಬಿಕೊಳ್ಳಲು ಬಿಡುವುದಾದರೆ ಉದ್ಯಾನ ನಿರ್ಮಾಣ ಮಾಡಿದ ಔಚಿತ್ಯವಾದರೂ ಏನು? ಸಂಬಂಧಪಟ್ಟವರು ಇನ್ನಾದರೂ ಇದರ ಬಗ್ಗೆ ಗಮನವಹಿಸಿ ಉದ್ಯಾನ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಗಮನ ನೀಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಉದ್ಯಾನಗಳ ಕೊರತೆ! ನಗರದ 31ನೇ ವಾರ್ಡ್ನಲ್ಲಿರುವ ಉದ್ಯಾನವನ ಹೊರತುಪಡಿಸಿ, ನಗರದ ನಿವಾಸಿಗಳ ವಾಯುವಿಹಾರಕ್ಕೆ ಒಂದು ಸುಸಜ್ಜಿತ ಉದ್ಯಾನ ಇಲ್ಲದಿರುವುದು ನಿಜಕ್ಕೂ ದುರಂತ ಎಂದರೆ ತಪ್ಪಾಗಲಾರದು. ಉದ್ಯಾನವನದ ಕೊರತೆಯಿಂದ ಜನರು ರಸ್ತೆಗಳಲ್ಲಿ ವಾಯುವಿಹಾರ ನಡೆಸುವಂತಾಗಿದೆ. ಜತೆಗೆ ನಗರದಲ್ಲಿ ಲಾಂತರ ರೂ. ವ್ಯಯ ಮಾಡಿ ನಿರ್ಮಾಣ ಮಾಡಿರುವ ಈ ಕಿರು ಉದ್ಯಾನಗಳ ಸಮರ್ಪಕ ನಿರ್ವಹಣೆ ಮಾಡಲು ಅಧಿಕಾರಿಗಳು ವಿಫಲವಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಕಿಂಗ್ ಮಾಡುವವರು ಹೆಚ್ಚಾಗುತ್ತಿದ್ದಾರೆ. ಸರ್ಕಾರದ ಅನುದಾನ ಬಳಸಿಕೊಂಡು ಪಾರ್ಕ್ ನಿರ್ಮಾಣ ಮಾಡಿ ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಸಾರ್ವಜನಿಕರ ಹಣದ ಪೋಲಾಗುತ್ತದೆ. ಪಾರ್ಕ್ ನಿರ್ವಹಣೆ ಮಾಡಿ ಸಾರ್ವಜನಿಕರ ಸೇವೆಗೆ ನೀಡಿದರೆ ನಗರಕ್ಕೂ ಶೋಭೆ ಬರುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. > ಅರ್ಪಿತಾ, ನಗರದ ನಿವಾಸಿ ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿರುವ ಕೆಎಸ್ಐಸಿ ಮಿಲ್ ಪಕ್ಕದಲ್ಲಿ ಕಿರು ಉದ್ಯಾನವನ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದುನಿಂತಿವೆ. ಜತೆಗೆ, ಇಲ್ಲಿರುವ ನೀರಿನ ಕೊಳ ಕೊಳೆತು ನಾರುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಇದರ ಪಕ್ಕವೇ ಸಬ್ ರಿಜಿಸ್ಟರ್ ಕಚೇರಿಯೂ ಇದೆ. ಉದ್ಯಾನವನ ಚೆನ್ನಾಗಿದ್ದರೆ ಸಾಕಷ್ಟು ಅನುಕೂಲವಾಗುತಿತ್ತು. > ದೀಪಕ್ , ಚನ್ನಪಟ್ಟಣ ನಿವಾಸಿ.