ಜಿಲ್ಲೆ

ನೋ ಪಾರ್ಕಿಂಗ್​ ಸ್ಥಳದಲ್ಲಿ ವಾಹನ ನಿಲುಗಡೆ

ಎನ್.ವೆಂಕಟೇಶ್

ವೀಲ್​ ಲಾಕ್​ ಮಾಡಿ ದಂಡ ವಿಧಿಸಿದ ಪೊಲೀಸರು

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ನಗರದ ಜನನಿಬಿಡಿ, ವಾಹನ ದಟ್ಟಣೆಯ ಮಾರ್ಗವಾದ ಬೆಂಗಳೂರು ಜೋಡಿ ರಸ್ತೆಯ ತಾಪಂ ಕಚೇರಿ ಮುಂಭಾಗದ ಸರ್ಕಾರಿ ಬಸ್​ಗಳು ನಿಲುಗಡೆಗೆ ನಿಮಾರ್ಣ ಮಾಡಿರುವ ಬಸ್​ ನಿಲುಗಡೆ ಸ್ಥಳದಲ್ಲಿ ನೋ ಪಾರ್ಕಿಂಗ್​ ನಾಮಫಲಕ ಹಾಕಿದ್ದರು ಕಾರು ನಿಲ್ಲಿಸಿದ್ದು, ಬಸ್​ ನಿಲುಗಡೆಗೆ ತೊಂದರೆಯಾದ ಹಿನ್ನೆಲೆ ಎಚ್ಚೆತ್ತುಕೊಂಡ ನಗರಠಾಣೆ ಪೊಲೀಸ್​ ಕಾರ್​ ವೀಲ್​ ಲಾಕ್​ ಮಾಡಿ ದಂಡ ವಿಧಿಸಿದ್ದಾರೆ.

ಆಸ್ಪತ್ರೆ, ವಾಣಿಜ್ಯ ಮಳಿಗೆಗಳ ಮುಂದೆ ಪಾರ್ಕಿಂಗ್​ ಸಿಗದೆ ಇದ್ದರೆ ಬಡಾವಣೆ ಮನೆಗಳ ಮುಂಭಾಗದ ವಾಹನ ದಟ್ಟಣೆ ರಸ್ತೆಗಳಲ್ಲಿ ವಾಹನ ನಿಲ್ಲಿಸುತ್ತಿದ್ದು, ಗಂಟೆಗಟ್ಟಲೆ ಬಾರದೆ ನಿವಾಸಿಗಳು ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.

ಹಲವು ಅಂಗಡಿ, ಮನೆಗಳ ಮುಂದೆ ವಾಹನ ನಿಲುಗಡೆ ನಿಷೇಧಿಸಿದೆ ಎಂದು ನಾಮಫಲಕ ಹಾಕಿದರೂ ವಾಹನ ನಿಲ್ಲಿಸಿ ಹೋಗುತ್ತಿದ್ದಾರೆ.ಇದರಿಂದ ಮನೆಯ ಗೇಟ್​ ತೆಗೆಯಲು ಸಾಧ್ಯವಾಗದೆ ಪರದಾಡಿದರೆ, ಅಂಗಡಿ ಮುಂದೆ ವಾಹನಗಳಲ್ಲಿ ನಿಲ್ಲಿಸಿ ಹೋಗುವುದರಿಂದ ವ್ಯಾಪಾರಕ್ಕೆ,ಅಂಗಡಿಗೆ ಬಂದ ಸರಕು&ಸಾಗಾಣೆ ವಾಹನದಿಂದ ಸರಕು ಇಳಿಸಿಕೊಳ್ಳುವುದಕ್ಕೂ ಅಂಗಡಿ ಮಾಲೀಕರು ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.

ಸಾಲುದಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಬಸ್​ ನಿಲುಗಡೆ ಸ್ಥಳದಲ್ಲಿ ಕಾರು, ಬೈಕ್​ ಪಾರ್ಕಿಂಗ್​ ಮಾಡುವುದರಿಂದ ರಸ್ತೆಯ ಮಧ್ಯೆ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ ನಂತರ ನಗರಠಾಣೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.