ಜಿಲ್ಲೆ

ದುರ್ಗದಬೈಲ್ ಸುತ್ತ ವಾರದವರೆಗೆ ವಾಹನಗಳ ನಿಲುಗಡೆ ಶುಲ್ಕ ರದ್ದು

ಹುಬ್ಬಳ್ಳಿ : ಹುಬ್ಬಳ್ಳಿಯ ದುರ್ಗದಬೈಲ್, ಬ್ರಾಡ್ ವೇ, ಶಾಹ ಬಜಾರ್, ಕೊಪ್ಪಿಕರ ರೋಡನಲ್ಲಿ ಒಂದು ವಾರದವರೆಗೆ ತಾತ್ಕಾಲಿಕವಾಗಿ ವಾಹನಗಳ ನಿಲುಗಡೆ ಶುಲ್ಕವನ್ನು ರದ್ದುಗೊಳಿಸಲಾಗಿದೆ.

ದುರ್ಗದಬೈಲ್​ನಲ್ಲಿ ವಾಹನಗಳ ನಿಲುಗಡೆ ಶುಲ್ಕ ಆಕರಣೆಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರೊಬ್ಬರು ಬೀದಿ ವ್ಯಾಪಾರಸ್ಥರ ಮೇಲೆ ಹಲ್ಲೆ ನಡೆಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿ, ಟೆಂಡರ್ ರದ್ದುಪಡಿಸುವಂತೆ ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರದಂದು ದುರ್ಗದಬೈಲ್ ವೃತ್ತಕ್ಕೆ ಭೇಟಿ ನೀಡಿದ ಮಹಾಪೌರರಾದ ಜ್ಯೋತಿ ಪಾಟೀಲ, ಉಪ ಮಹಾಪೌರ ಸಂತೋಷ ಚವ್ಹಾಣ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಸ್ಥಳೀಯ ವ್ಯಾಪಾರಸ್ಥರು ಹಾಗೂ ಬೀದಿ ವ್ಯಾಪಾರಸ್ಥರೊಂದಿಗೆ ಚರ್ಚೆ ನಡೆಸಿದರು.

ದುರ್ಗದಬೈಲ್ ವೃತ್ತದಲ್ಲಿ ಬೀದಿ ವ್ಯಾಪಾರಸ್ಥರು ನಿತ್ಯ ವ್ಯಾಪಾರ ನಡೆಸಿ, ಜೀವನ ನಡೆಸುತ್ತಾರೆ. ಹಾಗಾಗಿ, ಈ ಸ್ಥಳದಲ್ಲಿ ರ್ಪಾಂಗ್ ರದ್ದುಗೊಳಿಸುವಂತೆ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಹಾಗೂ ಇನ್ನಿತರ ಬೀದಿ ವ್ಯಾಪಾರಸ್ಥರು ಮನವಿ ಮಾಡಿದರು.

ಇದಕ್ಕೆ ಸ್ಪಂಧಿಸಿದ ಮಹಾಪೌರ ಜ್ಯೋತಿ ಪಾಟೀಲ, ಉಪ ಮಹಾಪೌರ ಸಂತೋಷ ಚವ್ಹಾಣ ಹಾಗೂ ಆಯುಕ್ತ ರುದ್ರೇಶ ಘಾಳಿ, ವಾಹನಗಳ ರ್ಪಾಂಗ್​ಗೆ ಜಾಗ ಕೊಡದಿದ್ದರೆ ವ್ಯಾಪಾರ ನಡೆಯುವುದು ಕಷ್ಟ ಎಂದರು.

ಬೀದಿ ಬದಿ ವ್ಯಾಪಾರಸ್ಥರು ಫುಟ್​ಪಾತ್ ಅತಿಕ್ರಮಿಸಿಕೊಂಡಿದ್ದಲ್ಲದೇ, ರಸ್ತೆ ಮೇಲೆಯೂ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಬೆಂಕಿ ಹಾಗೂ ಇನ್ನಿತರ ಅವಘಡಗಳು ಸಂಭವಿಸಿದರೆ ಅಗ್ನಿಶಾಮಕ ದಳದ ವಾಹನ ಈ ರಸ್ತೆಯಲ್ಲಿ ಬರುವುದಕ್ಕೂ ಅಡಚಣೆಯಾಗಿದೆ ಎಂದು ಹೇಳಿದರು.

ಕಾಯಂ ಅಂಗಡಿಕಾರರು, ಬೀದಿ ವ್ಯಾಪಾರಸ್ಥರು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ಕರೆದು, ವಾಹನಗಳ ನಿಲುಗಡೆ ಶುಲ್ಕ ಕುರಿತು ರ್ಚಚಿಸಲಾಗುವುದು. ಅಲ್ಲಿಯವರೆಗೆ ಒಂದು ವಾರದವರೆಗೆ ತಾತ್ಕಾಲಿಕವಾಗಿ ದುರ್ಗದಬೈಲ್, ಬ್ರಾಡ್ ವೇ, ಶಾಹ ಬಜಾರ್, ಕೊಪ್ಪಿಕರ ರೋಡನಲ್ಲಿ ವಾಹನಗಳ ನಿಲುಗಡೆ ಶ ಶುಲ್ಕವನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ, ಬಿಜೆಪಿಯ ವಿನಯ ಲದವಾ, ರಾಜು ಕೋರ್ಯಾಣಮಠ ಹಾಗೂ ಇನ್ನಿತರರು ಹಾಜರಿದ್ದರು.