ಕಾರು ಹಾನಿಗೊಳಿಸುವ ಕಾಲ್ಪನಿಕ ಎಐ ಚಿತ್ರ 
ಜಿಲ್ಲೆ

ಕಾರು ಹಾನಿಗೊಳಿಸಿದ್ದ ಅಂಗಡಿ ಮಾಲೀಕಗೆ ದಂಡ CAR

ನಿಶಾಂತ ಎನ್ ಬಿಲ್ಲಂಪದವು
ಪುತ್ತೂರು: ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿದರೆ ತನ್ನ ಅಂಗಡಿಗೆ ಬರುವ ಗ್ರಾಹಕರಿಗೆ ಸಮಸ್ಯೆಯಾಗುತ್ತದೆಂದು ಮಾಲೀಕರೊಬ್ಬರು ವಾಹನಗಳ ಚಕ್ರದ ಗಾಳಿ ತೆಗೆಯುವುದು, ಗೀರು ಹಾಕುವುದು ಮತ್ತಿತರ ಕೃತ್ಯ ಎಸಗುತ್ತಿದ್ದರು. ಇತ್ತೀಚೆಗೆ ವಾಹನವೊಂದಕ್ಕೆ ಗೀರು ಹಾಕಿ ಹಾನಿ ಮಾಡಿ ಅತಿರೇಕದ ವರ್ತನೆ ತೋರಿದ ಅಂಗಡಿ ಮಾಲೀಕನಿಗೆ ತಕ್ಕ ಶಾಸ್ತಿ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಸಮೀಪದಲ್ಲಿ ಮುಖ್ಯ ರಸ್ತೆಯ ಅಂಗಡಿಯೊಂದರ ಮಾಲೀಕ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಗೀರು ಹಾಕಿ ಹಾನಿ ಮಾಡಿದ್ದರು. ಕಾರು ಮಾಲೀಕ ಪೊಲೀಸ್ ಸಹಾಯವನ್ನು ಯಾಚಿಸಿದ್ದು, ಪಕ್ಕದ ಅಂಗಡಿಯ ಸಿಸಿ ಕ್ಯಾಮರಾ ಗಮನಿಸಿದಾಗ ಅಂಗಡಿ ಮಾಲೀಕನ ಕೃತ್ಯ ಪತ್ತೆಯಾಗಿದೆ. ಕಾರು ರಿಪೇರಿಗೆ ದುಬಾರಿ ವೆಚ್ಚ ಪಾವತಿಸುವಂತೆ ಅಂಗಡಿ ಮಾಲೀಕನಿಗೆ ಬೇಡಿಕೆ ಇಟ್ಟಿದ್ದು, ಕೊನೆಗೆ ೫ ಸಾವಿರ ರೂ. ಪಾವತಿಸಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.