ಜಿಲ್ಲೆ

1 ಲಕ್ಷ ರೂ. ಮೌಲ್ಯದ ಪಟಾಕಿ ವಶ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪರ್ಕಳದ ಮುಖ್ಯ ರಸ್ತೆಯಲ್ಲಿರುವ ಪ್ರೋವಿಜನ್​ ಸ್ಟೋರ್​ಗೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು 766 ಕೆ.ಜಿ ತೂಕದ ಸುಮಾರು 1.26 ಲಕ್ಷ ರೂ. ಮೌಲ್ಯದ ಅಕ್ರಮ ಪಟಾಕಿ ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯಂತೆ ಮಣಿಪಾಲ ಇನ್ಸ್​ಪೆಕ್ಟರ್​ ದೇವರಾಜ್​ ಟಿ.ವಿ. ಅವರು ಉಡುಪಿ ತಹಶಿಲ್ದಾರರ ಸಮಕ್ಷಮ ದಾಳಿ ನಡೆಸಿದ್ದಾರೆ. ಪ್ರೋವಿಜನ್​ ಸ್ಟೋರ್​ ಹಾಗೂ ರಸಗೊಬ್ಬರ ಮಾರಾಟ ಅಂಗಡಿಯ ಹಿಂಬದಿಯ ಗೋಡನ್​ನಲ್ಲಿ ಇಪ್ಪತ್ತೂಕ್ಕೂ ಹೆಚ್ಚು ಬಾಕ್ಸ್​ಗಳಲ್ಲಿ ಪಟಾಕಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.