ಮಂಡ್ಯ: ಜಿಲ್ಲಾದ್ಯಂತ ವಿಶ್ವ ಪರಿಸರ ದಿನವನ್ನು ಗಿಡ ನೆಟ್ಟು ನೀರೆರೆಯುವ ಮೂಲಕ ಆಚರಣೆ ಮಾಡಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಗರದ ಮನುಗನಹಳ್ಳಿಯ ನ್ಯಾಯಾಂಗ ಬಡಾವಣೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ, ನ್ಯಾಯಾಧೀಶರಾದ ಎನ್.ಶೀಲಾ, ಕೆ.ಕೃಷ್ಣಪ್ರಸಾದ್‌ರಾವ್, ಕೆ.ನಿರ್ಮಲಾ, ಶಭಾನಾ ಬೇಗಂ ಎಲ್.ಲಡ್ಕನ್, ನಾಗಜ್ಯೋತಿ, ವಿಜಯಕುಮಾರ್ ರೈ, ಎ.ಎಂ.ನಳಿನಿಕುಮಾರಿ, ಡಿ.ಹೇಮಾಶ್ರೀ, ವಿಶ್ವನಾಥ್ ಚನ್ನಬಸಪ್ಪ ಗೌಡರ್, ಶಂಕರರೆಡ್ಡಿ, ಪೂಜಾಶೆಟ್ಟಿ, ಕೆ.ಟಿ.ಚಂದ್ರಿಕಾ, ವಜ್ರೇಶ್, ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ. ಮಹೇಶ್ ಹಾಜರಿದ್ದರು.
ಸಸಿನೆಟ್ಟ ಡಿಸಿ, ಸಿಇಒ: ನಗರದ ಜಿಲ್ಲಾಧಿಕಾರಿ ಕಚೇರಿಯ ಕಾವೇರಿ ಉದ್ಯಾನದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ಸಸಿ ನೆಟ್ಟು ನೀರೆರೆದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.
ಮಂಡ್ಯ ನಗರದ ಹೌಸಿಂಗ್ ಬೋರ್ಡ್ ಎರಡನೇ ಹಂತದಲ್ಲಿರುವ ಉದ್ಯಾನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಪೌರಾಯುಕ್ತ ಮಂಜುನಾಥ್ ಅವರು ಚಾಲನೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ರಾಮಚಂದ್ರಯ್ಯ, ದರ್ಶನ್, ಶ್ರೀಧರ್, ದಾಸೇಗೌಡ, ರಾಮಣ್ಣ ಇತರರಿದ್ದರು.