ಜಿಲ್ಲೆ

ಪರಿಮಳಾ ನೃತ್ಯೋತ್ಸವ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಸೃಜನಾ ರಂಗ ಮಂದಿರದಲ್ಲಿ ಭರತ ನೃತ್ಯ ಅಕಾಡೆಮಿ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಆಶ್ರಯದಲ್ಲಿ ಡಿ. 29ರಂದು ಸಂಜೆ 5 ಗಂಟೆಗೆ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಪರಿಮಳಾ ನೃತ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಹು-ಧಾ ಮಹಾನಗರ ಪಾಲಿಕೆ ಮಾಜಿ ಮಹಾಪೌರ ಈರೇಶ ಅಂಚಟಗೇರಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಧಾರವಾಡ ರೋಟರಿ ಕ್ಲಬ್​ ಅಧ್ಯಕ್ಷ ಡಾ.ರಿತೇಶ ಉಪನಾಳ, ವೈದ್ಯ ಡಾ. ಆರ್​.ವಿ.ದೇಶಪಾಂಡೆ, ನಿವೃತ್ತ ಪೊಲೀಸ್​ ಅಧಿಕಾರಿ ಬಸವರಾಜ ಕಟಕೋಳ, ಮುಕ್ತಾ ವೇರ್ಣೆಕರ, ಶ್ರೀ ರಾಜಲಕ್ಷ್ಮೀ ದೇವಸ್ಥಾನ ಕಮಿಟಿ ಅಧ್ಯಕ್ಷ ಆರ್​.ಎ. ಕನ್ನೂರ, ಉಪಾಧ್ಯಕ್ಷ ಎಸ್​.ಎಂ. ಪಾಟೀಲ, ಡಾ.ಪ್ರಸನ್ನ ಬೈಂದೂರ, ಪ್ರಕಾಶ ಹಾವಣಗಿ, ಅಂದಾನೆಪ್ಪ ನರಗುಂದ ಪಾಪಾಲ್ಗೊಳ್ಳುವರು. ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸುವರು.

ಭರತ ನೃತ್ಯ ಅಕಾಡೆಮಿಯ ಯುವ ಉದಯೋನ್ಮುಖ ಕಲಾವಿದರ ಭರತನಾಟ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ಕೊಳಲು ವಿದ್ವಾನ್​ ರಾಹುಲ್​ ರಾಮ್​, ರಿದಮ್​ ಪ್ಯಾಡ್​ ರಾವೇಂದ್ರ ರಂಗದೋಳ, ಮೃದಂಗಂ ವಿದ್ವಾನ್​ ಪದ್ಮರಾಜ್​, ಗಾಯನ-ನಟುವಾಂಗ ವಿದ್ವಾನ್​ ರಾಜೇಂದ್ರ ಟೊಣಪಿ, ತಬಲಾ ಅನಿಲ ಮೇತ್ರಿ ಪಾಲ್ಗೊಳ್ಳಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ವಿದ್ವಾನ್​ ರಾಜೇಂದ್ರ ಟೊಣಪಿ ತಿಳಿಸಿದ್ದಾರೆ.