ಜಿಲ್ಲೆ

ಸಿರಿಗೆರೆಯಲ್ಲಿ ಕಾಶಿ ಮಹಾಲಿಂಗ ಶ್ರೀಗಳ ಪರೇವು

ಸಿರಿಗೆರೆ: ತರಳಬಾಳು ಮಠದ ಶ್ರೀ ಕಾಶಿ ಮಹಾಲಿಂಗ ಸ್ವಾಮೀಜಿ ಗದ್ದುಗೆಯಲ್ಲಿ ಶ್ರಾವಣ ಕಡೆ ಸೋಮವಾರದ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಾಸೋಹಕ್ಕೆ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಸಿರಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು, ಶಾಲಾ-ಕಾಲೇಜ್ ಮಕ್ಕಳು ಪ್ರಸಾದ ಸ್ವೀಕರಿಸಿದರು.

ಭಾನುವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಶಿ ಮಹಲಿಂಗ ಸ್ವಾಮೀಜಿ ಅವರ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ಮೆರವಣಿಗೆ ನಡೆಸಲಾಯಿತು.