ಅಳವಂಡಿ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರದ ಜತೆಗೆ ಅನೇಕ ಟ್ರಷ್ಟ್‌ಗಳು ಶ್ರಮಿಸುತ್ತಿವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬೀರಪ್ಪ ಡೊಳ್ಳಿನ ಹೇಳಿದರು.
ಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ತ್ರೈಮಾಸಿಕ ಸಭೆ ಹಾಗೂ ಟಾಟಾ ಕಲಿಕೆ ಟ್ರಸ್ಟ್ ವತಿಯಿಂದ ಕಲಿಕಾ ಪ್ರಗತಿ ಪರಿಶೀಲನೆ, ಹಾಗೂ ಎಸ್ ಡಿಎಂಸಿ ಕಾರ್ಯಚಟುವಟಿಕೆಗಳ ಕುರಿತು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
ಮಕ್ಕಳಿಗೆ ಬಾಹ್ಯ ಆಸ್ತಿ ಗಳಿಸುವುದಕ್ಕಿಂತ ಶಿಕ್ಷಣವೆಂಬ ದೊಡ್ಡ ಆಸ್ತಿಯನ್ನು ನೀಡಿದಲ್ಲಿ ಆ ಮೂಲಕ ಅವರ ಜೀವನದ ಹಾದಿ ಸುಗಮವಾಗಲಿದೆ ಎಂದರು. ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಅಂದಪ್ಪ ಹಾರೋಗೇರಿ, ಹನುಮಂತಪ್ಪ ಕಟಂಬ್ಲಿ, ಆಶಾ ಬಿ ಹಡಗಲಿ, ಮಲ್ಲಪ್ಪ ಕುರಿ, ವಿಜಯಲಕ್ಷ್ಮೀ ನೇತ್ರಾವತಿ ಇತರರಿದ್ದರು.