ಮಳವಳ್ಳಿ ಪಟ್ಟಣದ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಮಿಕ ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜಿ ಅವರು ಫಲಾನುಭವಿ ಕಾರ್ಮಿಕರಿಗೆ ಉದ್ಯೋಗ ಪರಿಕರಗಳ ಕಿಟ್ ವಿತರಿಸಿದರು. ಸುಭಾಷ್, ಅನಿತಾ, ಶ್ರೀಕಂಠಸ್ವಾಮಿ, ಹೇಮಂತ್ ಇತರರು ಇದ್ದರು. 
ಜಿಲ್ಲೆ

ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಿ

ವಸಂತಕುಮಾರ್ ಬಿ

ಮಳವಳ್ಳಿ: ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜಿ ತಿಳಿಸಿದರು.

ಪಟ್ಟಣದ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಮಿಕ ಕಾಯ್ದೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಕಾರಣಗಳಿಂದ ಬಹಳಷ್ಟು ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ವಂಚಿತರಾಗುವಂತೆ ಮಾಡುವುದರ ಜತೆಗೆ ಬಾಲ್ಯದಲ್ಲೇ ದುಡಿಮೆಗೆ ಕಳುಹಿಸುತ್ತಾರೆ. ಇದರಿಂದ ಕಾನೂನು ಬಾಹಿರವಾಗಿ ಬಾಲಕಾರ್ಮಿಕರಾಗುವ ಮಕ್ಕಳು ತಮ್ಮ ಭವಿಷ್ಯದ ಬದುಕನ್ನು ಕಾರ್ಮಿಕ ವೃತ್ತಿಯಲ್ಲೆ ಮುಂದುವರಿಸುವ ಅನಿವಾರ್ಯತೆಗೆ ಸಿಲುಕಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಉತ್ತಮ ಶಿಕ್ಷಣ ಕೊಡಿಸಿ ವಿದ್ಯೆಗೆ ಬಡತನ ಬಾರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕಾರ್ಮಿಕ ಇಲಾಖೆಯಿಂದ ಫಲಾನುಭವಿಗಳಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್, ತಾಲೂಕು ಕಾರ್ಮಿಕ ನಿರೀಕ್ಷಕಿ ಅನಿತಾ, ಅಪರ ಸರ್ಕಾರಿ ಅಭಿಯೋಜಕ ಶ್ರೀಕಂಠಸ್ವಾಮಿ, ಶಿಕ್ಷಣ ಇಲಾಖೆ ಹೇಮಂತ್ ಇತರರಿದ್ದರು.