ಹುಬ್ಬಳ್ಳಿ : ಪ್ರತಿಭಾವಂತ ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಪೋಷಕರ ತಾಳ್ಮೆ, ತ್ಯಾಗವಿದೆ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ನಗರದ ಕೇಶ್ವಾಪುರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕನಸು ಕಂಡಿರುತ್ತಾರೆ. ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲೆ ಇದೆ ಎಂದರು.
ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಮುಖ್ಯಸ್ಥ ಸಂಜೀವ ಗಲಗಲಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಸಿಗುವ ಅವಕಾಶವನ್ನು ಪರಿಶ್ರಮ, ಶೃದ್ಧೆಯಿಂದ ಬಳಸಿಕೊಂಡರೆ ಸಾಧನೆ ಸಾಧ್ಯವಾಗುವುದು ಎಂದರು.
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ 40 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಪುರಸ್ಕಾರ ಹಾಗೂ ಬ್ಯಾಕ್ ಪ್ಯಾಕ್, ನೋಟ್ ಬುಕ್ಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಲೋಕೋಪಯೋಗಿ ಇಲಾಖೆಯ ಅಕೌಂಟಂಟ್ ರಮೇಶ ಕುಲಕರ್ಣಿ, ರಾಷೊ್ಟ್ರೕತ್ಥಾನ ಬ್ಲಡ್ ಬ್ಯಾಂಕ್ ಅಧ್ಯಕ್ಷ ದತ್ತಮೂರ್ತಿ ಕುಲಕರ್ಣಿ, ಗೋಕುಲ ರಸ್ತೆ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಭಾಸ್ಕರ ಪಾಟೀಲ, ನರಸಿಂಹ ಕೊತವಾಲ, ಕೇಶ್ವಾಪುರ ಸಂಘದ ಆಡಳಿತ ಮಂಡಳಿ ಸದಸ್ಯರಾದ ವಿಲಾಸ ಕೊಣ್ಣೂರ, ರಾಘವೇಂದ್ರ ಗುಡಿ, ಮನೋಹರ ಪರ್ವತಿ, ಪ್ರದೀಪ ಜೋಶಿ, ಧಿರೇಂದ್ರ ಬಾಗಲಕೋಟೆ, ಮನೋಜ ಪರ್ವತಿಕರ, ಸರಸ್ವತಿ ಗುಡಿ, ಇತರರು ಉಪಸ್ಥಿತರಿದ್ದರು.
ಸಂಘದ ಕಾರ್ಯುಧ್ಯಕ್ಷ ಸುನಿಲ ಗುಮಾಸ್ತೆ ಸ್ವಾಗತಿಸಿದರು. ಲಕ್ಷ್ಮೀ ಪರ್ವತಿಕರ ಪ್ರಾರ್ಥಿಸಿದರು. ಪ್ರಹ್ಲಾದ ಪರ್ವತಿ ನಿರೂಪಿಸಿದರು. ಕಾರ್ಯದರ್ಶಿ ವೆಂಕಟೇಶ ದಿವಾಣಜಿ ವಂದಿಸಿದರು.