ಜಿಲ್ಲೆ

ಪಾಲಕರನ್ನು ಗೌರವದಿಂದ ಕಾಣಲಿ

ಪ್ರಶಾಂತ ಹೂಗಾರ

ಅಥಣಿ: ಭಾರತೀಯ ಸಂಸ್ಕೃತಿಯಲ್ಲಿ ತಂದೆ- ತಾಯಿಗೆ ಪೂಜ್ಯನೀಯ ಸ್ಥಾನವಿದೆ. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ನದಿಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠದ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಆಧುನಿಕ ಜಗತ್ತಿನಲ್ಲಿ ತಂದೆ-ತಾಯಿಯ ಸೇವೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ ಅರಿತು ಬದುಕುವುದು ಅವಶ್ಯ ಎಂದರು.

ಹೊನವಾಡದ ಪ್ರವಚನಕಾರ ಬಾಬುರಾವ ಮಹಾರಾಜರು ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿಗೆ ನೋವಾಗದಂತೆ ನಡೆದುಕೊಳ್ಳಬೇಕು ಎಂದರು.

ಮಲ್ಲಿಕಾರ್ಜುನ ಗಂಗಾಧರ, ಗಣ್ಯರಾದ ಡಾ.ರವಿ ಸಂಕ, ಎಂ.ಸಿ.ದುಂಡಿ, ಪ್ರಕಾಶ ನೇತ್ರವಾಲ್ಕರ್ ಮಾತನಾಡಿ, ತಂದೆ-ತಾಯಿಯನ್ನು ಪೂಜ್ಯನೀಯ ಮನೋಭಾವದಿಂದ ಕಾಣಬೇಕು ಎಂದರು.

ಪ್ರವಚನಕಾರ ಬಾಬುರಾವ ಮಹಾರಾಜರ 62ನೇ ಜನ್ಮದಿನ ಆಚರಿಸಲಾಯಿತು. ಮಲ್ಲಿಕಾರ್ಜುನ ವಾಲಿ, ಸಂಗಪ್ಪ ಉಣ್ಣಿ, ಮಹಾದೇವ ಬಿರಾದಾರ, ಪ್ರಕಾಶ ಚನ್ನಣವರ, ಮುತ್ತು ಹಿರೇಮಠ, ಶಿವರಾಯ ಮಂಟೂರ, ಬಸವರಾಜ ಚನ್ನಣವರ, ವಿನಾಯಕ ಗಂಗಾಧರ, ಸುಜಾತಾ ಕೋಹಳ್ಳಿ, ಸುನೀತಾ ಶಿಂಧೆ, ಕವಿತಾ ಮಠಪತಿ, ಸಿದ್ದು ನಂದಿವಾಲೆ ಇತರರು ಇದ್ದರು.