ಜಿಲ್ಲೆ

ಮದುವೆಗೆ ಪಾಲಕರ ವಿರೋಧ, ಜೋಡಿ ವಿವಾಹಕ್ಕೆ ಸಾಕ್ಷಿಯಾದ ಅಧಿಕಾರಿಗಳಿಂದ ಆಶೀರ್ವಾದ

ಚಿಕ್ಕಬಳ್ಳಾಪುರ: ಪಾಲಕರ ವಿರೋಧದ ನಡುವೆ ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಪ್ರೇಮಿಗಳು ಅಂತಾರ್ಜಾತಿ ವಿವಾಹವಾಗಿದ್ದು ಮದುವೆಗೆ ಅಧಿಕಾರಿಗಳೇ ಸಾಕ್ಷಿಯಾಗಿದ್ದಾರೆ.
ಗುಡಿಬಂಡೆ ತಾಲೂಕಿನ ಗಂಧನಾಗೇನಹಳ್ಳಿಯ ಯುವಕ ಮುನಿ ಆಂಜಿನೇಯ ಮತ್ತು ಗೌರಿಬಿದನೂರು ತಾಲೂಕಿನ ಹಳೇ ಉಪ್ಪಾರಹಳ್ಳಿ ಯ ದಿವ್ಯಶ್ರೀ ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.  ಇವರ ವಿವಾಹಕ್ಕೆ ಯುವತಿಯ ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.  ಇದರಿಂದ ಇಬ್ಬರು ಮನೆಯನ್ನು ಬಿಟ್ಟು ಹೋಗಿ ವಿವಾಹವಾಗಿದ್ದು ಗುಡಿಬಂಡೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಣಿಗೆ ಕಚೇರಿ ಆವರಣದಲ್ಲಿದ್ದ ಯುವತಿಯ ಸಂಬಂಧಿಕರು ಯುವತಿಯ ಕೈ ಹಿಡಿದುಕೊಂಡು ಕಾರಿನಲ್ಲಿ ಕರೆದು ಕೊಂಡು ಹೋಗಲು ಯತ್ನಿಸಿದ್ದಾರೆ. ಇದನ್ನು  ಸಾರ್ವಜನಿಕರು ತಡೆದು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ‌ ಸ್ಥಳಕ್ಕೆ ಬಂದ ಪೊಲೀಸರು ಜೋಡಿಗಳನ್ನು ಠಾಣೆಗೆ ಕರೆದುಕೊಂಡು ಬಂದು ರಕ್ಷಣೆ ನೀಡಿದ್ದು ಬಳಿಕ ತಾಲೂಕು ದಲಿತ ಹಾಗೂ ವಾಲ್ಮೀಕಿ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ  ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದಾರೆ. ಇದೇ ವೇಳೆ ತಹಶೀಲ್ದಾರ್ ಸಿಗ್ಬತ್ ವುಲ್ಲಾ ಮದುವೆ ವಿವಾಹ ಪತ್ರವನ್ನು ನೀಡಿ ಪ್ರೇಮಿಗಳಿಗೆ ಉತ್ತಮವಾಗಿ ಬದುಕಿ ಬಾಳಲು ಕಿವಿ ಮಾತು ಹೇಳಿದರು.