ಬೈಂದೂರು: ಜಡ್ಕಲ್ ಗ್ರಾಮದ ಸಳ್ಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಹಣಿ ಕೆ.ಕೆ. ಅಧ್ಯಕ್ಷತೆಯಲ್ಲಿ ಪಾಲಕರ ಸಭೆ ನಡೆಯಿತು.
ಮಂಗಳೂರು ಗ್ರಾಮ ಸ್ವರಾಜ್ ಪ್ರತಿಷ್ಠಾನ ವತಿಯಿಂದ ನೀಡಲಾದ ಸುವಾರು 35,000 ರೂ. ವೆಚ್ಚದ ನೋಟ್ ಪುಸ್ತಕಗಳನ್ನು ಪ್ರತಿಷ್ಠಾನ ಟ್ರಸ್ಟಿ ಉದಯಕುವಾರ್ ಶೆಟ್ಟಿ ಅಡಿಕೆಕೊಡ್ಲು ವಿತರಿಸಿದರು.
ಸುವರ್ಣ ವಿದ್ಯಾನಿಧಿ ಅಧ್ಯಕ್ಷ ಸುರೇಂದ್ರ ನಾಯ್ಕ ನೇತ್ರಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಶಿಕ್ಷಕ ಗಿರೀಶ್ ಜಿ.ಎಚ್. ಶೈಕ್ಷಣಿಕ ವಾಹಿತಿ ನೀಡಿದರು. ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಬೆಳಾರಿ ಕೈ ತೊಳೆಯುವ ಟಕ ಉದ್ಘಾಟಿಸಿದರು. ಉಪಾಧ್ಯಕ್ಷೆ ಭಾರತಿ ಜಿ.ಶೆಟ್ಟಿ ದಾನಿಗಳ ನೆರವಿನಿಂದ ಅಳವಡಿಸಿದ್ದ ನೂತನ ಪ್ರೊಜೆಕ್ಟರನ್ನು ಶಾಲೆಗೆ ಹಸ್ತಾಂತರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್‌ಕುವಾರ್ ಪೂಜಾರಿ ವಿದ್ಯಾರ್ಥಿ ಮಂತ್ರಿಮಂಡಲದ ಪ್ರತಿನಿಧಿಗಳಿಗೆ ಪ್ರವಾಣ ವಚನ ಬೋಧಿಸಿದರು.
ಎಸ್‌ಡಿಎಂಸಿಯಲ್ಲಿ ತೆರವಾದ ಮೂರು ಸದಸ್ಯ ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ವಾಡಲಾಯಿತು. ಪಂಚಾಯಿತಿ ಸದಸ್ಯ ನಾರಾಯಣ ಶೆಟ್ಟಿ, ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂ ಉಪಾಧ್ಯಕ್ಷ ದೇವದಾಸ್ ವಿ.ಜೆ., ಉದ್ಯಮಿ ಸುಭೋದ್ ಶೆಟ್ಟಿ ಬಡಗುಳಿ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ನಕ್ಷತ್ರ ನಾಯ್ಕ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರೇವಾ ಎಸ್.ನಾಯ್ಕ, ಸುವರ್ಣ ವಿದ್ಯಾನಿಧಿ ಉಪಾಧ್ಯಕ್ಷ ಮಹಾಬಲ ಪೂಜಾರಿ, ಸಿಆರ್‌ಪಿ ಶೈಲಜಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಭಾಸ್ಕರ ನಾಯ್ಕ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಜಯಂತಿ ವಂದಿಸಿದರು. ಸಹಶಿಕ್ಷಕ ಸತೀಶ್ ದೇವಾಡಿಗ ನಿರೂಪಿಸಿದರು.