ಜಿಲ್ಲೆ

ಗೋಣಿಕೊಪ್ಪಲು ಸಮಾಪ್ರಾ ಶಾಲೆ ಪೋಷಕರ ಸಭೆ

ಸುನಿಲ್ ಪೊನ್ನೇಟಿ

ಗೋಣಿಕೊಪ್ಪಲು:

ಹೆಣ್ಣು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಪೋಷಕರು ಹೆಣ್ಣುಮಕ್ಕಳ ಭದ್ರತೆಯ ಬಗ್ಗೆ ಗಮನ ಹರಿಸಬೇಕು ಎಂದು ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಚ್ ಕೆ ಕುಮಾರ್ ಹೇಳಿದರು. ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಪೋಷಕರ ಸಭೆ ಮತ್ತು ಶಾಲಾಭಿವೃದ್ಧಿ ಸಮಿತಿ ರಚನಾ ಸಭೆಯಲ್ಲಿ ಮಾತನಾಡಿದರು.

ಹೆಣ್ಣುಮಕ್ಕಳು ಮನೆಯಲ್ಲಿರುವುದರಿಂದ ಆಘಾತಕಾರಿ ಘಟನೆಗಳು ನಡೆಯುವ ಸಂಭವಗಳು ಹೆಚ್ಚಿರುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಸುರಕ್ಷತೆಗೆ ಪೋಷಕರು ಜಾಗೃತೆ ವಹಿಸಬೇಕು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದರಿಂದ ಪೋಷಕರು ತಮ್ಮ ಮಕ್ಕಳ ಭದ್ರತೆ ಆತಂಕದಿAದ ದೂರ ಇರಬಹುದು ಎಂದರು.

ನಂತರ ನಡೆದ ಶಾಲಾ ಅಭಿವೃದ್ಧಿ ಸಮಿತಿ ರಚನೆಯಲ್ಲಿ ಅಧ್ಯಕ್ಷರಾಗಿ ಕೆ.ಬಿ. ಜಗದೀಶ್, ಉಪಾಧ್ಯಕ್ಷರಾಗಿ ಬಿ.ಆರ್. ದಿವ್ಯ ಮತ್ತು ಸದಸ್ಯರುಗಳಾಗಿ ಪಿಂಟು ಸಿಂಗ್, ರಾಕೇಶ್, ವಿ. ಅರುಣ್ ಕುಮಾರ್, ಸೌಮ್ಯ, ತೇಜಸ್ವಿನಿ, ದೀಪಿಕಾ, ಅನಿತಾ, ಪಿ.ಬಿ. ಮೀನಾ, ಮಂಜುಳಾ, ರೆಜಿಯ ಸುಲ್ತಾನ್ , ಸೌಜನ್ಯ, ಶ್ವೇತ, ಚಂದ್ರಕಲಾ, ಪೂಜಾ, ಮೀನಾಕ್ಷಿ, ಗೌರಿ ಇವರುಗಳನ್ನು ಪೋಷಕರ ಸರ್ವನಾಮತದಿಂದ ಆಯ್ಕೆ ಮಾಡಿದರು. ಶಾಲೆಯ ಶಿಕ್ಷಕರು ಈ ಸಂದರ್ಭ ಇದ್ದರು.