ಕೂಡ್ಲಿಗಿಯಲ್ಲಿ ತಹಸೀಲ್ದಾರ್ ಟಿ.ಜಗದೀಶಗೆ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮನವಿ ಸಲ್ಲಿಸಲಾಯಿತು. ವೇದಿಕೆ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ಪ್ರಮುಖರಾದ ಟಿ.ಭಾಗ್ಯಾ, ರತ್ನಮ್ಮ, ಲಕ್ಷ್ಮೀ ದೇವಿ, ಪಿ.ಬಂಗಾರಯ್ಯ, ಕೆ.ಕರಿಯಣ್ಣ, ಹೊನ್ನೇಶ, ಹುಲುಗಪ್ಪ, ಸತೀಶ, ಬಿ.ರುದ್ರಪ್ಪ, ಕವಿತಮ್ಮ ಇತರರಿದ್ದರು. 
ಜಿಲ್ಲೆ

ಪಾಲಕರಿಗೆ ನೇರವಾಗಿ ವರ್ಗಾವಣೆ ಪತ್ರ ನೀಡಿ

ರುದ್ರಪ್ಪ ವಾಲಿ

ಕೂಡ್ಲಿಗಿ: ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆಯುವಾಗ ಮಕ್ಕಳ ಮೂಲದಾಖಲೆಯಂತೆ ನಮೂದಿಸಬೇಕು ಎಂದು ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಮಂಗಳವಾರ ತಹಸೀಲ್ದಾರ್ ಟಿ.ಜಗದೀಶಗೆ ಮನವಿ ಸಲ್ಲಿಸಲಾಯಿತು.

ವೇದಿಕೆಯ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ಮಾತಾನಾಡಿ, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ ಸೇರಿ ಜನನ ಪ್ರಮಾಣ ಪತ್ರದಂತೆ ಮುಖ್ಯ ಶಿಕ್ಷಕರು ದಾಖಲಾತಿ ಮಾಡಿಕೊಳ್ಳಬೇಕು.

ತರಾತುರಿಯಲ್ಲಿ ಪಾಲಕರ ಮೂಲದಾಖಲೆಗಳನ್ನು ಸರಿಯಾಗಿ ಓದದೆ ಅವರ ಹೆಸರಿನ ಮುಂದೆ ಇನ್ಶಿಯಲ್ ಅನ್ನು ಹಿಂದೆ-ಮುಂದೆ ಮಾಡುತ್ತೀರಿ. ಇದರಿಂದ ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯ ಪಡೆಯುವಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ನೇರವಾಗಿ ಪಾಲಕರಿಗೆ ನೀಡದೆ ಆನ್‌ಲೈನ್‌ನಲ್ಲಿಯೇ ಕಳಿಸಲಾಗುತ್ತದೆ. ಪಾಲಕರ ಸಮ್ಮುಖದಲ್ಲಿ ವರ್ಗಾವಣೆ ಪತ್ರ ನೀಡಿದರೆ, ತಪ್ಪಾಗಿರುವುದನ್ನು ಗಮನಿಸುತ್ತಾರೆ ಎಂದರು.


ಒಂದನೇ ತರಗತಿಗೆ ಪ್ರವೇಶ ಹಾಗೂ ಏಳನೇ ತರಗತಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣನಾಗಿ ಬೇರೆ ಶಾಲೆಗೆ ವರ್ಗಾವಣೆ ಪತ್ರ ನೀಡುವಾಗ ಮುಖ್ಯಶಿಕ್ಷಕರು ಪಾಲಕರ ಮೂಲದಾಖಲೆಯಂತೆ ಬರೆದು ಕೊಡಬೇಕೆಂದು ಒತ್ತಾಯಿಸಿದರು.