ಎಸ್‌ಡಿಎಂಸಿ ಅಧ್ಯಕ್ಷ ದಿನೇಶ ಆಚಾರ್ಯ, ಉಪಾಧ್ಯಕ್ಷೆ ರಾಧಿಕಾ ಶೆಟ್ಟಿ, ಸಮಿತಿ ಸದಸ್ಯರನ್ನು ಅಭಿನಂದಿಸಲಾಯಿತು.  
ಜಿಲ್ಲೆ

ಶಾಲಾಭಿವೃದ್ಧಿಗೆ ಪಾಲಕರ ಪ್ರೋತ್ಸಾಹ ಅಗತ್ಯ

Karthika K.S

ಬೈಂದೂರು: ಪ್ರತಿಯೊಂದು ಸರ್ಕಾರಿ ಶಾಲೆ ಅಭಿವೃದ್ಧಿಯಾಗಬೇಕಾದರೆ ಅಲ್ಲಿರುವ ಶಿಕ್ಷಕರ ಇಚ್ಛಾಶಕ್ತಿ, ಶಾಲಾಭಿವೃದ್ಧಿ ಸಮಿತಿ ಜವಾಬ್ದಾರಿ, ಪಾಲಕರ ಪ್ರೋತ್ಸಾಹ ಹಾಗೂ ಸಮುದಾಯದ ಸಹಭಾಗಿತ್ವ ಅತಿ ಅಗತ್ಯ. ಔಪಚಾರಿಕ ಶಿಕ್ಷಣದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗೆ ವಿಫುಲ ಅವಕಾಶವಿರುವ ಸೂಕ್ತ ಶೈಕ್ಷಣಿಕ ಸಂಸ್ಥೆಗೆ ಮಕ್ಕಳನ್ನು ಸೇರಿಸಬೇಕು ಎಂದು ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಖಾರ್ವಿ ಹೇಳಿದರು.

ನಾಗೂರು ಹಿಂದೂಸ್ಥಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಮುದಾಯದತ್ತ ಶಾಲೆ ಹಾಗೂ ಪುಷ್ಟಿ ರಾಜ್ಯ ಪ್ರಶಸ್ತಿ ಸಂಭ್ರಮ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ, 1 ಲಕ್ಷ ರೂ. ವೆಚ್ಚದ ನೂತನ ಡಿಜಿಟಲ್ ತರಗತಿ ಉದ್ಘಾಟಿಸಿ ಮಾತನಾಡಿದರು.

ಕರ್ಣಾಟಕ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಘಟಕವನ್ನು ಬ್ಯಾಂಕ್ ವಲಯ ಹಿರಿಯ ವ್ಯವಸ್ಥಾಪಕ ವಿಷ್ಣುಮೂರ್ತಿ ಉಪಾಧ್ಯಾಯ ಹಾಗೂ ನಾಗೂರು ಶಾಖಾ ವ್ಯವಸ್ಥಾಪಕ ಪರಮೇಶ್ವರ ಪೂಜಾರಿ ಮುಖ್ಯಶಿಕ್ಷಕರಿಗೆ ಹಸ್ತಾಂತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ದಿನೇಶ ಆಚಾರ್ಯ, ಉಪಾಧ್ಯಕ್ಷೆ ರಾಧಿಕಾ ಶೆಟ್ಟಿ, ಸಮಿತಿ ಸದಸ್ಯರನ್ನು ಅಭಿನಂದಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಶಿಕ್ಷಣ ಸಂಯೋಜಕ ಸತ್ಯನಾ ಕೊಡೇರಿ, ನೋಡೆಲ್ ಅಧಿಕಾರಿ ಮಂಜುನಾಥ ನಾಯ್ಕ, ಸಿಆರ್‌ಪಿ ಗಣೇಶ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಎಸ್‌ಡಿಎಂಸಿ ಗೌರವಾಧ್ಯಕ್ಷ ಅಬ್ದುಲ್ ರಹೆಮಾನ್, ಅಧ್ಯಕ್ಷ ಮಹಮ್ಮದ್ ರಫೀಕ್ ಇದ್ದರು. ಮುಖ್ಯಶಿಕ್ಷಕ ವಿಶ್ವನಾಥ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಭಾಸ್ಕರ ಬಾಡ ಸ್ವಾಗತಿಸಿದರು. ಶೋಭಾ ಕೊಠಾರಿ ನಿರೂಪಿಸಿದರು.

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಜೀವನ ಪದ್ಧತಿಯ ಆದರ್ಶ, ಮೌಲ್ಯ, ಸಂಸ್ಕಾರ-ಸಂಸ್ಕೃತಿಗೆ ಪ್ರಾಧಾನ್ಯತೆ ಸಿಗದ ಕಾರಣದಿಂದಾಗಿ ವಿದ್ಯಾರ್ಥಿಗಳು ಲೌಕಿಕ ಸುಖ, ಭೋಗದ ಕಡೆಗೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಯುವ ಸಮುದಾಯದಲ್ಲಿ ನೈತಿಕ ಮೌಲ್ಯಗಳಿಗಿಂತ ಸ್ವಾರ್ಥ ಚಿಂತನೆಯೇ ಹೆಚ್ಚಾಗಿದೆ. ಶೇಖರ ಖಾರ್ವಿ, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ https://www.vijayavani.net/inspirational-work-in-the-religious-and-social-fields-2 https://www.vijayavani.net/lets-solve-the-parking-problem