ಬ್ರಹ್ಮಾವರ: ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಪಾಲಕರ ಸಹಕಾರ ಅಗತ್ಯ ಎಂದು ನಿರ್ವಹಣಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಹೇಳಿದರು.
ಕುಂಜಾಲಿನ ವಿಶ್ವಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಮುಖ್ಯಶಿಕ್ಷಕ ಬಾಲಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ರಕ್ಷಕರ ಸಭೆ ಜರುಗಿತು.
ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜ್ಯೋತಿ ಭಟ್ ಅಧ್ಯಕ್ಷರಾಗಿ, ನಿಖಿಲ್ ಉಪಾಧ್ಯಕ್ಷರಾಗಿ, ಸುಮಾ ಕಾರ್ಯದರ್ಶಿಯಾಗಿ, ರಮೇಶ ಕೋಶಾಧಿಕಾರಿಯಾಗಿ ಆಯ್ಕೆಗೊಂಡು ಕಾರ್ಯಕಾರಿ ಸಮಿತಿ ರಚಿಸಲಾಯಿತು. ನಿರ್ವಹಣಾ ಸಮಿತಿ ಉಪಾಧ್ಯಕ್ಷ ರಮೇಶ್ ಪೂಜಾರಿ, ಖಜಾಂಜಿ ಕೆ.ಟಿ.ನಾಯ್ಕ, ನೀಲಾವರ ಪಿಡಿಒ ಗೀತಾ ಬಾಳಿಗ, ಮುಕುಂದ್ ನಾಯ್ಕ, ನಿಯೋಜಿತ ಮುಖ್ಯಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಸುಮನ ಕಾರ್ಯಕ್ರಮ ನಿರ್ವಹಿಸಿದರು. ಸುಮಾ ವಂದಿಸಿದರು.